ಪ್ರತಾಪ್, ಸಂಗೀತಾ ಕಣ್ಣಿಗೆ ಹಾನಿ: ಕನ್ನಡಕ ಹಾಕಿಕೊಂಡು ಎಂಟ್ರಿ

Public TV
1 Min Read
Bigg Boss 3 1

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರವಿಡೀ  ಮನೆ ಪ್ರಕ್ಷುಬ್ದವಾಗಿಯೇ ಇತ್ತು. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು. ಪರಿಣಾಮವಾಗಿ ಸಂಗೀತಾ (Sangeeta Sringeri) ಮತ್ತು ಪ್ರತಾಪ್ (Drone Pratap) ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದ ಪರಿಣಾಮವಾಗಿ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.

Bigg Boss 2 1

ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್‌, ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್‌ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ತನಿಷಾ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Bigg Boss 1 2

ಮನೆಯೊಳಗೆ ಬಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರ ಕಣ್ಣಿಗೂ ಬಿಸಿಲುರಕ್ಷಕ ಕಡುಗಪ್ಪು ಕನ್ನಡಕವನ್ನು ಹಾಕಲಾಗಿದೆ. ಟಾಸ್ಕ್‌ನಲ್ಲಿ ಉಂಟಾದ ಹಾನಿಯ ಪರಿಣಾಮವಾಗಿ ಅವರು ಕನ್ನಡಕ ಧರಿಸಿಯೇ ಮನೆಯೊಳಗೆ ಪ್ರವೇಶಿಸಿದ್ದಾರೆ.

 

ಹಾಗಾದರೆ, ಪ್ರತಾಪ್ ಮತ್ತು ಸಂಗೀತಾ ಆರೋಗ್ಯ ಈಗ ಹೇಗಿದೆ? ಅವರು ಬಿಗ್‌ಬಾಸ್ ಮನೆಯಲ್ಲಿ ಮುಂದುವರಿಯುವಷ್ಟು ಆರೋಗ್ಯವಂತರಾಗಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಸಿಗಲಿದೆ.

Share This Article