ಚೆನ್ನೈ: ಆರಂಭದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್ ಬಳಿಕ ರೋಹಿತ್ ಶರ್ಮಾ (Rohit Sharma) ಮತ್ತು ಯಶಸ್ವಿ ಜೈಸ್ವಾಲ್ ಅವರ ಶತಕದ ಜೊತೆಯಾಟದ ನೆರವಿನಿಂದ ಅಫ್ಘಾನಿಸ್ತಾನದ(Afghanistan) ವಿರುದ್ಧ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಅಫ್ಘಾನಿಸ್ತಾನ 44.2 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಭಾರತ (Team India) 28.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 224 ರನ್ ಹೊಡೆದು ಜಯ ಗಳಿಸಿತು. ಈ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಮೊದಲ ಸರಣಿಯಲ್ಲೇ ಗಿಲ್ ಶುಭಾರಂಭ ಮಾಡಿದ್ದಾರೆ.
ಶತಕದ ಜೊತೆಯಾಟ:
ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal ) ಮೊದಲ ವಿಕೆಟ್‌ಗೆ ಕೇವಲ 138 ಎಸೆತಗಳಲ್ಲಿ 170 ರನ್‌ಗಳ ಸ್ಫೋಟಕ ಜೊತೆಯಾಟವಾಡಿ ಗೆಲುವನ್ನು ಸುಲಭಗೊಳಿಸಿದರು. ರೋಹಿತ್ ಶರ್ಮಾ 79 ರನ್(69 ಎಸೆತ, 9 ಬೌಂಡರಿ, 3 ಸಿಕ್ಸ್) ಹೊಡೆದು ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು.
Commanding. Clinical. Clean sweep 🔥#TeamIndia seal a 3⃣-0⃣ series victory with an excellent run chase in Chennai 🥳
Scorecard ▶️ https://t.co/kHgF4bqTg3#INDvAFG | @IDFCFIRSTBank pic.twitter.com/TTcROLncgN
— BCCI (@BCCI) June 20, 2026
ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಮುರಿಯದ ಎರಡನೇ ವಿಕೆಟಿಗೆ 35 ಎಸೆತಗಳಲ್ಲಿ 54 ರನ್ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು. ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಯಶಸ್ವಿ ಜೈಸ್ವಾಲ್ ಅಜೇಯ 110 ರನ್ (86 ಎಸೆತ, 14 ಬೌಂಡರಿ, 3 ಸಿಕ್ಸ್) ಸಿಡಿಸಿದರೆ ಶ್ರೇಯಸ್ ಅಯ್ಯರ್ ಔಟಾಗದೇ 20 ರನ್(19 ಎಸೆತ, 2 ಸಿಕ್ಸ್) ಹೊಡೆದರು.
ಪ್ರಸಿದ್ಧ್ ಮಾರಕ ಬೌಲಿಂಗ್
ಕರ್ನಾಟಕದ ಪ್ರಸಿದ್ಧ್ ಕೃಷ್ಣ (Prasidh Krishna) ಮಾರಕ ದಾಳಿಗೆ ತತ್ತರಿದ ಅಫ್ಘಾನಿಸ್ತಾನ 36 ರನ್ ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಶಾಹಿದಿ, ಭಾರತದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಹೋರಾಟದ 102 ರನ್(131 ಎಸೆತ, 13 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರೆ ಉತ್ತಮ ಸಾಥ್ ನೀಡಿದ ಒಮರಾಝೈ ಉಪಯುಕ್ತ 50 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
Identical setups, identical results 🔄
Prasidh Krishna 🤝 Rohit Sharma 😎
Updates ▶️ https://t.co/kHgF4bqTg3#TeamIndia | #INDvAFG | @IDFCFIRSTBank pic.twitter.com/Bf2YPIA59l
— BCCI (@BCCI) June 20, 2026
ಪ್ರಸಿದ್ಧ್ ಅಕ್ಷರಶಃ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಅಫ್ಘಾನ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಇವರು 8.2 ಓವರ್ ಎಸೆದು 2 ಮೇಡನ್ ಜೊತೆ 23 ರನ್ ನೀಡಿ 5 ಪ್ರಮುಖ ವಿಕೆಟ್‌ಗಳನ್ನು ಕೀಳುವ ಮೂಲಕ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.
ಅಫ್ಘಾನಿಸ್ತಾನದ ನಾಯಕ ಹಷ್ಮತುಲ್ಲಾ ಶಾಹಿದಿ ಬ್ಯಾಟಿಂಗ್ ಮಾಡುವಾಗ ಪಿಚ್‌ನ ನಿರ್ಬಂಧಿತ ಪ್ರದೇಶದಲ್ಲಿ (Danger Area) ಓಡಿದ್ದರು. ಅಂಪೈರ್ ನಿಯಮದ ಪ್ರಕಾರ ಇದು ಅಪರಾಧವಾದ್ದರಿಂದ, ಭಾರತ ತಂಡಕ್ಕೆ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ 5 ಪೆನಾಲ್ಟಿ ರನ್‌ಗಳನ್ನು ನೀಡಲಾಯಿತು.
