‘ಸಲಾರ್’ ಪಾರ್ಟ್‌ 2 ಬರೋದು ಪಕ್ಕಾ- ಬಾಯ್ಬಿಟ್ಟ ಜಗಪತಿ ಬಾಬು

Public TV
2 Min Read
jagapathi babu

ನ್ನಡದ ಜಾಗ್ವರ್, ಮದಗಜ, ರಾಬರ್ಟ್ ಸಿನಿಮಾಗಳಲ್ಲಿ ಬಹುಭಾಷಾ ನಟ ಜಗಪತಿ ಬಾಬು ಅವರು ‘ಸಲಾರ್’ (Salaar) ಪ್ರಭಾಸ್ ಮುಂದೆ ಜಗಪತಿ ಬಾಬು (Jagapathi Babu) ಅಬ್ಬರಿಸಲಿದ್ದಾರೆ. ಪ್ರಭಾಸ್‌ಗೆ ಠಕ್ಕರ್ ಕೊಡಲು ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಈ ಬಗ್ಗೆ ಟಿಟೌನ್‌ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಜೊತೆ ಸಲಾರ್‌ ಸಿನಿಮಾ ಬಗ್ಗೆ ಮೇಜರ್‌ ಅಪ್‌ಡೇಟ್‌ ಕೊಟ್ಟಿದ್ದಾರೆ.

jagapathi babu

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜಗಪತಿ ಬಾಬು ಅವರಿಗೆ ಸಖತ್ ಡಿಮ್ಯಾಂಡ್‌ಯಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಜಗಪತಿ ಬಾಬು ಅವರೇ ಬೇಕು ಎನ್ನುವಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಆಗಿದೆ. ಹೀಗಿರುವಾಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಅವರ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ.

salaar

ಖಡಕ್ ರೋಲ್‌ನಲ್ಲಿ ಜಗಪತಿ ಬಾಬು ‘ಸಲಾರ್’ನಲ್ಲಿ (Salaar) ನಟಿಸಿದ್ದಾರೆ. ಸಲಾರ್ ಮೊದಲ ಭಾಗದಲ್ಲಿ ಜಗಪತಿ ಬಾಬು (Jagapathi Babu) ಅವರ ಪಾತ್ರದ ಪರಿಚಯವಾಗುತ್ತದೆ. ಸಲಾರ್ ಎರಡನೇ ಭಾಗದಲ್ಲಿ ಜಗಪತಿ ಬಾಬು ಪೂರ್ಣ ಪ್ರಮಾಣದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಾರೆ. ರಾಜಮಾನಾರ್ ಎಂಬ ರೋಲ್‌ನಲ್ಲಿ ಜಗಪತಿ ಬಾಬು ನಟಿಸಿದ್ದಾರೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ಕೆಜಿಎಫ್‌ನಂತೆಯೇ ಸಲಾರ್‌ ಎರಡು ಭಾಗಗಳಲ್ಲಿ ಬರೋದಾಗಿ ಜಗಪತಿ ಬಾಬು ಬಾಯ್ಬಿಟ್ಟಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಪ್ರಶಾಂತ್‌ ನೀಲ್‌- ಪ್ರಭಾಸ್‌ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

salaar

ಪ್ರಭಾಸ್ ಮುಂದೆ ಅಬ್ಬರಿಸಲು ಜಗಪತಿ ಬಾಬು 4 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಸಣ್ಣ ಪ್ರಾಜೆಕ್ಟ್ ಮತ್ತು ದೊಡ್ಡ ಬಜೆಟ್ ಸಿನಿಮಾ ಎಂಬುದೆಲ್ಲಾ ಏನು ಇಲ್ಲಾ. ಕಥೆ ಚೆನ್ನಾಗಿರಬೇಕು ಎನ್ನುತ್ತಾರೆ ಸಲಾರ್ ನಟ ಜಗಪತಿ ಬಾಬು. ಇದನ್ನೂ ಓದಿ:ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ‘ಪಠಾಣ್’ ಬೆಡಗಿ

ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ ಸಲಾರ್‌ನಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಸೇರಿದಂತೆ ಹಲವರು ನಟಿಸಿದ್ದಾರೆ. ಕನ್ನಡದ ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.

Share This Article