‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

Public TV
1 Min Read
prabhas

ತೆಲುಗು ನಟ ಪ್ರಭಾಸ್ (Prabhas) ಇದೀಗ ‘ಸಲಾರ್’ ನಿರ್ದೇಶಕ ಪ್ರಶಾಂತ್ ನೀಲ್‌ರನ್ನು ಹಾಡಿ ಹೊಗಳಿದ್ದಾರೆ. ನೀವು ಹೀರೋನೇ ಎಂದು ನಿರ್ದೇಶಕ ಪ್ರಶಾಂತ್ ನೀಲ್‌ ಸ್ಟೈಲೀಶ್‌ ಲುಕ್‌ಗೆ (Prashanth Neel) ಪ್ರಭಾಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ ಆರ್ಭಟ

Prashanth neel and prabhas

ಹೈದರಾಬಾದ್‌ನಲ್ಲಿ ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದ ಮುಹೂರ್ತ ನಡೆದಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪ್ರಶಾಂತ್ ನೀಲ್‌ ಕೂಡ ಭಾಗಿಯಾಗಿದ್ದರು. ಈ ವೇಳೆ, ಬ್ಲ್ಯಾಕ್ ಔಟ್ ಫಿಟ್‌ನಲ್ಲಿ ಸ್ಟೈಲೀಶ್‌ ಆಗಿ ಎಂಟ್ರಿ ಕೊಟ್ಟ ನಿರ್ದೇಶಕನನ್ನು ನೋಡಿ ಆ ಕ್ಷಣವೇ ‘ಲುಕ್ ಲೈಕ್ ಹೀರೋ’ ಅಂತ ಪ್ರಭಾಸ್ ಮೆಚ್ಚುಗೆ ಸೂಚಿಸಿದ್ದರು. ಆಗ ನಗು ನಗುತ್ತಲೇ ನಟನನ್ನು ಪ್ರಶಾಂತ್ ನೀಲ್ ತಬ್ಬಿಕೊಂಡರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇಬ್ಬರ ಸ್ನೇಹ ಕಂಡು ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

ಅಂದಹಾಗೆ, ಇಂದಿಗೂ ಇಬ್ಬರ ಒಡನಾಟ ಚೆನ್ನಾಗಿದೆ ಎಂಬುದಕ್ಕೆ ಈ ಸಂದರ್ಭ ಸಾಕ್ಷಿಯಾಗಿದೆ. ಈ ಹಿಂದೆ ಇಬ್ಬರ ಬಾಂಧವ್ಯ ಚೆನ್ನಾಗಿಲ್ಲ. ‘ಸಲಾರ್ 2’ (Salaar 2)  ಸೆಟ್ಟೇರಲ್ಲ ಎಂದೆಲ್ಲಾ ಕಿಡಿಗೇಡಿಗಳು ಸುದ್ದಿ ಹಬ್ಬಿಸಿದ್ದರು. ಅದಕ್ಕೆ, ಪ್ರಶಾಂತ್ ನೀಲ್ ಪತ್ನಿ ಪರೋಕ್ಷವಾಗಿ ಟೀಕೆಗಳಿಗೆ ಉತ್ತರ ಕೊಟ್ಟಿದ್ದರು. ಈಗ ಮತ್ತೊಮ್ಮೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆಯಾಗಿರೋದು ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತಕ್ಕ ಉತ್ತರ ಸಿಕ್ಕಿದೆ.

ಪ್ರಭಾಸ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ‘ಸಲಾರ್ 2’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನೂ ಕಳೆದ ವಾರ ‘ಕೆಜಿಎಫ್ 2’ (KGF 2) ನಿರ್ದೇಶಕನ ಜೊತೆಗಿನ ಜ್ಯೂ.ಎನ್‌ಟಿಆರ್ ಹೊಸ ಚಿತ್ರದ ಮುಹೂರ್ತ ಸರಳವಾಗಿ ಜರುಗಿದೆ. ಸೆಪ್ಟೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾದ ಬಳಿಕ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಕೈಜೋಡಿಸಲಿದ್ದಾರೆ.

Share This Article