ಬೆಂಗಳೂರು: ಜಟ್ಕಾ ಕಟ್ ಅಭಿಯಾನದಂತೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ವಿರುದ್ಧವೂ ಅಭಿಯಾನ ಮಾಡುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಬ್ಯಾನ್ ಮಾಡಿದ್ದರು. ಗಣಪತಿ ಕೂರಿಸಲು ಹಲವು ರೂಲ್ಸ್ ತಂದರು. ಅದನ್ನು ನಾವು ಪಾಲನೆ ಮಾಡಿದ್ದೇವೆ. ಇದನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಎಲ್ಲರೂ ಪಾಲನೆ ಮಾಡುತ್ತಾರೆ. ಆದರೆ ಮುಸ್ಲಿಂ ಧರ್ಮ ಮಾತ್ರ ಬೆಳಗ್ಗೆ 5 ಗಂಟೆಗೆ ಅಜಾದ್ ಕೂಗುತ್ತಾರೆ. ಆ ಧರ್ಮದಲ್ಲಿ ಈ ಬಗ್ಗೆ ಉಲ್ಲೇಖವೇ ಇಲ್ಲ ಎಂದು ವಿರೋಧಿಸಿದರು.
Advertisement
Advertisement
ಜನವರಿ 2021ರಲ್ಲಿ ಹೈಕೋರ್ಟ್ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಗಿರೀಶ್ ಭಾರದ್ವಾಜ್ ಎನ್ನುವವರು ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಆಧಾರದ ಮೇಲೆ ಧಾರ್ಮಿಕ ಜಾಗಗಳಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್
Advertisement
ಹೈಕೋರ್ಟ್ ಜಿಲ್ಲಾ ಪೊಲೀಸ್ ಆಯುಕ್ತರಿಗೆ ಕಂಟ್ರೋಲ್ ಮಾಡಲು ಆದೇಶ ಹೊರಡಿಸಿದೆ. ಇದರಂತೆ ಜನವರಿ 2022 ರಲ್ಲಿ ಸಿದ್ಧಾಪುರದ ಠಾಣಾ ವ್ಯಾಪ್ತಿಯಲ್ಲಿ ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಎರಡು ಮಸೀದಿಗಳನ್ನು ತೆರವುಗೊಳಿಸಲಾಗಿತ್ತು. ಇದು ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಜಾರಿಗೆ ಬರಬೇಕು ಎಂದು ಆದೇಶಿಸಿದರು.
Advertisement
ನಾಗರಿಕ ವೆಲ್‌ಫೇರ್ ಅಸೋಸಿಯೇಷನ್‌ಗಳಿಂದ ಆಯಾ ಠಾಣಾ ವ್ಯಾಪ್ತಿಯಲ್ಲಿ ಹೈಕೋರ್ಟ್ ಆರ್ಡರ್ ಪ್ರತಿ ನೀಡಿ ಆದೇಶ ಜಾರಿಗೆ ತರುವಂತೆ ನಾವು ಮನವಿ ಮಾಡುತ್ತೇವೆ. ಪೊಲೀಸರೇ ಇದರ ಜವಬ್ದಾರಿ ತೆಗೆದುಕೊಳ್ಳಬೇಕು. ಹೀಗಾಗಿ ಅವರ ಮೇಲೆ ಈ ಜವಬ್ದಾರಿ ಹಾಕುತ್ತೇವೆ ಎಂದರು. ಇದನ್ನೂ ಓದಿ: ಮಸೀದಿ, ದೇವಸ್ಥಾನ, ಚರ್ಚ್‍ಗಳಲ್ಲಿ ಜೋರಾಗಿ ಮೈಕ್ ಹಾಕಿದ್ರೆ ಧರ್ಮಗಳ ನಡುವೆ ಸಂಘರ್ಷ ಆಗುತ್ತೆ: ಈಶ್ವರಪ್ಪ
ನಾವಿಲ್ಲಿ ಅಲ್ಪಸಂಖ್ಯಾತರು, ನಾವು ಬಲಿಷ್ಠವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಮುಸ್ಲಿಮರು ಹೀಗೆ ಮಾಡುತ್ತಿದ್ದಾರೆ. ನಮ್ಮ ಧರ್ಮ ಶಕ್ತಿಯುತವಾಗಿದೆ ಎಂದು ಭಯ ಸೃಷ್ಠಿ ಮಾಡಲು ಹೀಗೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಕೂಡಾ ಹೋರಾಟ ಮಾಡಲಿದ್ದೇವೆ ಎಂದು ಸಂಬರಗಿ ತಿಳಿಸಿದರು.