ಕನ್ನಡದ ಹೆಮ್ಮೆಯ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಇನ್ನೂ ಹತ್ತು ವರ್ಷ ಕನ್ನಡದ ಸಿನಿಮಾಗಳನ್ನೇ ಮಾಡಲ್ಲವಾ? ಇಂಥದ್ದೊಂದು ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಸದ್ಯ ಅವರು ಒಪ್ಪಿಕೊಂಡಿರುವ ಸಿನಿಮಾಗಳ ಪ್ರಕಾರ ಯಾವುದೇ ಕಾರಣಕ್ಕೂ ಹತ್ತು ವರ್ಷ ಸ್ಯಾಂಡಲ್ ವುಡ್ ನತ್ತ ಅವರು ಮುಖ ನೋಡುವುದಿಲ್ಲ ಎಂದು ಹೇಳಲಾಗುತ್ತಿದೆ.
Advertisement
ಈಗಾಗಲೇ ಸಲಾರ್ (Salar) ಸಿನಿಮಾದಲ್ಲಿ ಅವರು ಬ್ಯುಸಿಯಾಗಿದ್ದಾರೆ. ನಂತರ ಜ್ಯೂನಿಯರ್ ಎನ್.ಟಿ.ಆರ್ (Jr.NTR) ಸಿನಿಮಾವನ್ನು ನಿರ್ದೇಶನ ಮಾಡಬೇಕು. ಅಲ್ಲಿಂದ ಮತ್ತೆ ಸಲಾರ್ 2 ಚಿತ್ರ ಮಾಡುತ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ನಡುವೆ ದಿಲ್ ರಾಜುಗಾಗಿ ಮತ್ತೊಂದು ಸಿನಿಮಾವನ್ನು ಪ್ರಶಾಂತ್ ತಯಾರಿಸಿ ಕೊಡಬೇಕಿದೆ. ಇವೆಲ್ಲವೂ ಮುಗಿಯುವುದಕ್ಕೆ ಕನಿಷ್ಠ ಹತ್ತು ವರ್ಷವಾದರೂ ಬೇಕು ಎನ್ನುತ್ತಾರೆ ಸಿನಿ ಪಂಡಿತರು. ಇದನ್ನೂ ಓದಿ:ಸೂರ್ಯನಿಗೆ ನಾಯಕಿಯಾದ ಬಾಲಿವುಡ್ ನಟಿ ದಿಶಾ ಪಟಾನಿ
Advertisement
Advertisement
ಈವರೆಗೂ ಒಂದೇ ವರ್ಷದಲ್ಲಿ ಯಾವ ಸಿನಿಮಾವನ್ನೂ ಪ್ರಶಾಂತ್ ಮುಗಿಸಿಲ್ಲ. ಕನಿಷ್ಠ ಒಂದೂವರೆ ಎರಡು ವರ್ಷಗಳ ಕಾಲ ತಗೆದುಕೊಂಡಿದ್ದಾರೆ ಈ ಲೆಕ್ಕದಲ್ಲಿ ಅವರ ಕೈಯಲ್ಲಿ ಸಲಾರ್, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ, ಸಲಾರ್ 2, ದಿಲ್ ರಾಜು (Dil Raju) ನಿರ್ಮಾಣದ ಚಿತ್ರಗಳಿವೆ. ಹಾಗಾಗಿ ಅವರು ತೆಲುಗು ಚಿತ್ರೋದ್ಯಮದಲ್ಲೇ ಅಷ್ಟು ವರ್ಷಗಳ ಕಾಲ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಪ್ರಶಾಂತ್ ನೀಲ್ ಯಾವುದೇ ಸಿನಿಮಾ ಮಾಡಿದರೂ, ಅದು ಪ್ಯಾನ್ ಇಂಡಿಯಾ ಮಟ್ಟದಲ್ಲೇ ಇರುತ್ತದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಒಂದೇ ಭಾಷೆಗೆ ಅವರನ್ನು ಸೀಮಿತ ಮಾಡುವುದು ಬೇಡ ಎನ್ನುವ ಮಾತುಗಳನ್ನೂ ಕೆಲವರು ಆಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲೂ ಪ್ರಶಾಂತ್ ನೀಲ್ ನೇರವಾಗಿ ಒಂದು ಸಿನಿಮಾ ಮಾಡಬೇಕಿತ್ತು. ಅದು ಶ್ರೀಮುರಳಿಗೆ ಎಂದೂ ಫಿಕ್ಸ್ ಆಗಿತ್ತು. ಆ ಸಿನಿಮಾ ಯಾವಾಗ ಶುರುವಾಗತ್ತೋ ಕಾದು ನೋಡಬೇಕಿದೆ.