ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಬಗ್ಗೆ ಮೊದಲಿನಿಂದಲೂ ಹಲವು ಊಹಾಪೋಹಗಳು ಕೇಳಿ ಬರುತ್ತಿವೆ. ಅದರಲ್ಲೀ ಸಲಾರ್ ಸಿನಿಮಾ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಎಂದು ಸುದ್ದಿ ಆಗಿತ್ತು. ಉಗ್ರಂ ಸಿನಿಮಾದ ಅನೇಕ ಅಂಶಗಳನ್ನು ಸಲಾರ್ ಚಿತ್ರಕ್ಕಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವುದರಿಂದ ಕನ್ನಡದ ಸಿನಿಮಾವನ್ನು ಸಲಾರ್ ರೂಪದಲ್ಲಿ ಮತ್ತೆ ಕನ್ನಡಕ್ಕೆ ಕೊಡುವುದು ಎಷ್ಟು ಸರಿ ಎಂದು ಚರ್ಚೆ ಕೂಡ ಮಾಡಲಾಗಿತ್ತು. ಈಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್
ಸಲಾರ್ ಕುರಿತಾಗಿ ಎಷ್ಟೇ ಗಾಸಿಪ್ ಗಳು ಕೇಳಿ ಬಂದರೂ, ಅದಕ್ಕೆ ಯಾವುದೇ ರೀತಿಯಲ್ಲಿ ಉತ್ತರ ಕೊಡಲು ಹೋಗಿರಲಿಲ್ಲ ಪ್ರಶಾಂತ್ ನೀಲ್. ಇದೀಗ ಅವರು ಉತ್ತರ ಕೊಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಸಲಾರ್ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಅವರು ಉತ್ತರಿಸುತ್ತಾ, ‘ನನ್ನ ಉಗ್ರಂ ಸಿನಿಮಾದ ಛಾಯೆ ನನ್ನೆಲ್ಲ ಸಿನಿಮಾಗಳಲ್ಲೂ ಇರುತ್ತದೆ. ಹಾಗೆಯೇ ಸಲಾರ್ ಸಿನಿಮಾದಲ್ಲಿ ಇದೆ. ಹಾಗಂತ ಅದು ಉಗ್ರಂ ಸಿನಿಮಾದ ರಿಮೇಕ್ ಅಲ್ಲ. ಉಗ್ರಂ ಸಿನಿಮಾದ ಯಾವ ದೃಶ್ಯ ಅಥವಾ ಸ್ಟೋರಿಯನ್ನು ಬಳಸಿಕೊಂಡಿಲ್ಲ. ಫ್ರೆಶ್ ಆಗಿರುವ ಕಥೆಯನ್ನೇ ಸಲಾರ್ ನಲ್ಲಿ ಹೇಳಿದ್ದೇನೆ’ ಎಂದಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
ಸಲಾರ್ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರ. ಅಂದಾಜು 350 ಕೋಟಿಗೂ ಹೆಚ್ಚು ಬಂಡವಾಳವನ್ನು ಈ ಚಿತ್ರಕ್ಕಾಗಿ ವಿನಿಯೋಗಿಸಿದ್ದಾರೆ ವಿಜಯ್ ಕಿರಗಂದೂರು. ನಟ ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ಮಹತ್ವದ ಸಿನಿಮಾ ಇದಾಗಲಿದ್ದು, ಈ ಮೂಲಕ ಪ್ರಭಾಸ್ ಕನ್ನಡ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಅವರ ತೆಲುಗಿನ ಚೊಚ್ಚಲು ಸಿನಿಮಾ ಇದಾಗಿದ್ದರಿಂದ, ಈಗಾಗಲೇ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.