ಮೊಬೈಲ್ ಗಳು (Mobile) ಸಿನಿಮಾ ತಂಡಕ್ಕೆ ಕೊಡಬಾರದ ಕಷ್ಟ ಕೊಡುತ್ತಿವೆ. ಕೈಯಲ್ಲಿ ಮೊಬೈಲ್ ಇದೆ ಅನ್ನುವ ಕಾರಣಕ್ಕಾಗಿ ಸಿಕ್ಕ ಸಿಕ್ಕ ಫೋಟೋ ಮತ್ತು ವಿಡಿಯೋಗಳನ್ನು ತಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಕಾರಣದಿಂದಾಗಿ ಸಿನಿಮಾದ ಸಿಕ್ರೇಟ್ಸ್ ಬಯಲಾಗುತ್ತಿದೆ. ಇಂತಹ ತಲೆನೋವು ತಪ್ಪಿಸಲೆಂದೇ ಪ್ರಶಾಂತ್ ನೀಲ್ (Prashant Neil) ಕಠಿಣ ಕ್ರಮ ತಗೆದುಕೊಂಡಿದ್ದಾರೆ. ಶೂಟಿಂಗ್ (Shooting) ಸೆಟ್ ಗೆ ಯಾರೇ ಬಂದರೂ, ಮೊಬೈಲ್ ತರದಂತೆ ನಿರ್ಬಂಧ ಹೇರಿದ್ದಾರೆ.
Advertisement
ಕೆಲ ದಿನಗಳ ಹಿಂದೆಯಷ್ಟೇ ಸಲಾರ್ (Salar) ಸಿನಿಮಾದ ಪ್ರಮುಖ ದೃಶ್ಯವೊಂದರ ಫೋಟೋ ಲೀಕ್ ಆಗಿ, ಭಾರೀ ವೈರಲ್ ಆಗಿತ್ತು. ಅಲ್ಲದೇ, ಶೂಟಿಂಗ್ ಗೆ ಹಲವು ದೃಶ್ಯಗಳನ್ನು ವಿಡಿಯೋ ಮಾಡಿಯೂ ಹರಿ ಬಿಡಲಾಗಿತ್ತು. ಇದರಿಂದಾಗಿ ಸಿನಿಮಾದ ಗುಟ್ಟುಗಳು ರಟ್ಟಾಗಿದ್ದವು. ಇದನ್ನರಿತ ಪ್ರಶಾಂತ್ ನೀಲ್, ಯಾರೂ ಮೊಬೈಲ್ ತರಬಾರದು ಎಂದು ತಿಳಿಸಿದ್ದಾರೆ. ಇದು ನಟರನಿಗೂ ಅನ್ವಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್
Advertisement
Advertisement
ಕಲಾವಿದರು ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಬಳಸದಂತೆ ಮನವೊಲಿಸಿದ್ದು, ಶೂಟಿಂಗ್ ಗೆ ಬರುವಾಗ ತಮ್ಮ ಮೊಬೈಲ್ ಗಳನ್ನು ಕ್ಯಾರವಾನ್ ಗಳಲ್ಲೇ ಬಿಟ್ಟು ಬರುವಂತೆ ಹೇಳಿದ್ದಾರೆ. ಹಾಗಾಗಿ ಪ್ರಭಾಸ್ (Prabhas) ಸೇರಿದಂತೆ ಎಲ್ಲರೂ ಈ ನಿಯಮವನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ಅದರಲ್ಲೂ ತಂತ್ರಜ್ಞರು ಮತ್ತು ಇತರ ಕೆಲಸಗಾರರು ಕೂಡ ಕಟ್ಟು ನಿಟ್ಟಾಗಿ ಈ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಶೂಟಿಂಗ್ ಸೆಟ್ ಗಳು ಕೂಡ ಇದನ್ನು ಪಾಲಿಸಿಕೊಂಡು ಬರುತ್ತಿವೆ.