ಬೆಂಗಳೂರು: ಎಂಎಲ್‌ಎ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮತ್ತು ಪುತ್ರ ಪ್ರಶಾಂತ್ ಮಾಡಾಳ್‌ಗೆ (Prashant Madal) ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಐಟಿ, ಇಡಿಯಿಂದ 6 ಕೋಟಿ ರೂ. ಹಣ ಮೂಲದ ಮಾಹಿತಿ ಕೇಳಲಾಗಿದ್ರೆ, ಮತ್ತೊಂದು ಕಡೆ ಅಕೌಂಟ್ ಫ್ರೀಜ್ ಮಾಡಿ ಭ್ರಷ್ಟ ಅಧಿಕಾರಿ ಸಸ್ಪೆಂಡ್‌ಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮನೆಯಲ್ಲಿ ಸಿಕ್ಕ 6 ಕೋಟಿ ರೂ. ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಫೋನ್ ಮೂಲಕ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮಾಹಿತಿ ಪಡೆದಿದ್ದಾರೆ. 6 ಕೋಟಿ ರೂ.ಗೆ ಮೂಲ ತೋರಿಸಿರದ ಹಿನ್ನೆಲೆ, ಆದಾಯ ತೆರಿಗೆ ವಂಚಿಸಿರುವ ಬಗ್ಗೆ ಗುಮಾನಿಗಳಿವೆ. ಲೋಕಾಯುಕ್ತ ತನಿಖೆಯಲ್ಲಿ ಭ್ರಷ್ಟಾಚಾರದಿಂದ ಹಣ ದುಡಿದಿರುವುದು ಎಂಬುದು ಸಾಬೀತಾದರೆ, ಐಟಿ ಹಾಗೂ ಇಡಿ ತನಿಖೆ ಆರಂಭಿಸಲಿವೆ.
Advertisement
Advertisement
ಲೋಕಾಯುಕ್ತ ಪಡಸಾಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸರೆಂಡರ್ ಆಗಬಹದು ಎನ್ನುವ ಮಾಹಿತಿಗಳು ಓಡಾಡುತ್ತಿದೆ. ಕೇಸಲ್ಲಿ ಇವರೇ ಎ1 ಆರೋಪಿ ಇರುವುದರಿಂದ ಅಷ್ಟು ಸುಲಭವಾಗಿ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಅಲ್ಲದೇ ದೂರುದಾರ ಆಡಿಯೋ ಸಂಭಾಷಣೆ ಲೋಕಾಯುಕ್ತಕ್ಕೆ ನೀಡಿದ್ದಾರೆ. ಪುತ್ರನ ಮನೆಯಲ್ಲಿ 6 ಕೋಟಿ ರೂ. ಹಣ ಸಿಕ್ಕಿದೆ. ಹೆಚ್ಚು ದಿನ ತಲೆ ಮರೆಸಿಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಚುನಾವಣಾ ಆಯೋಗದಿಂದ ಯಾವಾಗ ಬೇಕಾದರೂ ಎಲೆಕ್ಷನ್ ಅನೌನ್ಸ್ ಆಗಬಹುದು. ಹೆಚ್ಚು ದಿನ ತಲೆ ಮರೆಸಿಕೊಂಡರೆ ಕ್ಷೇತ್ರದಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಹೀಗಾಗಿ ಸರೆಂಡರ್ ಆಗಬಹುದು ಎನ್ನಲಾಗುತ್ತಿದೆ.
Advertisement
Advertisement
ಈ ನಡುವೆ ಲೋಕಾ ಪೊಲೀಸರು ಪ್ರಶಾಂತ್ ಮಾಡಾಳ್‌ನನ್ನು ಅಮಾನತು ಮಾಡುವಂತೆ ಎಸಿಎಸ್ ಫೈನಾನ್ಸ್ ರವರಿಗೆ ಪತ್ರ ಬರೆದಿದ್ದಾರೆ. ಲೋಕಾ ಟ್ರ‍್ಯಾಪ್ ವೇಳೆ ಆರೋಪಿತ ಸಿಕ್ಕಿಬಿದ್ದಿದ್ದು, ಮನೆಯಲ್ಲಿ ಅಪಾರ ಪ್ರಮಾಣದ ಹಣ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಆರೋಪಿತ ಸ್ಥಾನದಲ್ಲಿರೊ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ
ಪ್ರಶಾಂತ್ ಮಾಡಾಳ್ ಹಾಗೂ ಆಪ್ತರಿಗೆ ಸೇರಿದ 5 ಅಕೌಂಟ್‌ಗಳನ್ನು ಫ್ರೀಜ್ ಮಾಡಿಸಲಾಗಿದೆ. ಅಕೌಂಟ್‌ನಲ್ಲಿ ಟ್ರ‍್ಯಾಪ್ ಹಿಂದಿನ ದಿನ ಒಂದು ಅಕೌಂಟ್ ನಿಂದ 30 ಲಕ್ಷ, ಮತ್ತೊಂದು ಅಕೌಂಟ್ ನಿಂದ 60 ಲಕ್ಷ ರೂ. ಹಣ ಕ್ರೆಡಿಟ್ ಆಗಿದೆ. ಹಣ ಯಾರ ಅಕೌಂಟ್‌ಗಳಿಂದ ಬಂದಿದೆ ಎಂಬುದನ್ನು ಕಳೆದ ಒಂದು ವರ್ಷದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ತಲೆ ಮರೆಸಿಕೊಂಡಿರುವ ಮಾಡಾಳ್ ವಿರೂಪಾಕ್ಷಪ್ಪಗೆ ಲೋಕಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಆರ್‌ಪಿಸಿ 41ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಖುದ್ದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಶಾಸಕರ ರೇಸ್ ವ್ಯೂ ಬಳಿಯ ಮನೆ, ಶಾಸಕರ ಕಚೇರಿ ಸೇರಿದಂತೆ 3 ಕಡೆ ನೋಟಿಸ್ ಅಂಟಿಸಲಾಗಿದೆ. ಅಪ್ಪ – ಮಗನ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ಬುಡಕ್ಕೆ ಬಂದಿದೆ. ಮಾಡಿದ್ದುಣ್ಣೊ ಮಾರಾಯ ಎಂಬಂತೆ ಅಪ್ಪ ಅಜ್ಞಾತವಾದರೆ, ಮಗ ಜೈಲು ಸೇರಿದ್ದಾನೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ