ಬಾಗಲಕೋಟೆ: ಉಪಚುನಾವಣೆ (Byelection ) ಹೊತ್ತಲ್ಲೇ ಬಾಗಲಕೋಟೆ (Bagalakote) ಬಿಜೆಪಿಯಲ್ಲಿ (BJP) ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಪಕ್ಷದ ಸಹ ವಕ್ತಾರ ಸ್ಥಾನಕ್ಕೆ ಪ್ರಸನ್ನ ಔರಸಂಗ (Prasanna Aurasanga) ರಾಜೀನಾಮೆ ನೀಡುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ನಾನು ನನ್ನ ಬಿಜೆಪಿ ಸಹ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದನ್ಯವಾದಗಳು ಎಂದು ಪ್ರಸನ್ನ ಔರಸಂಗ ಪೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಬಿಜೆಪಿ ಸಹ ವಕ್ತಾರನಾಗಿ ಆಯ್ಕೆ ಆದಾಗಿನ ಪತ್ರ ಹಾಕಿ ರಾಜೀನಾಮೆ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದು ಬಾಗಲಕೋಟೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಏ.9 ರಂದು ಉಪಚುನಾವಣೆ -ಮೇ 4ಕ್ಕೆ ಫಲಿತಾಂಶ
ಪೋಸ್ಟ್‌ನಲ್ಲಿ ಪಕ್ಷದಲ್ಲಿ ಕೆಲ ಹೊಗಳು ಭಟ್ಟರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಬೇರೆಯವರನ್ನು ಕಾಲ ಕಸದ ಹಾಗೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲ್ಲಿಸ್ತೇವೆ – ಐವರು ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ

