ಬಹುಭಾಷಾ ನಟಿ ಪ್ರಣಿತಾ ಸುಭಾಷ್ ತಾಯ್ತನದ ಆನಂದದಲ್ಲಿದ್ದು, ಪ್ರತಿಕ್ಷಣವನ್ನು ವಿಶೇಷ ಎಂಬಂತೆ ಕಳೆಯುತ್ತಿದ್ದಾರೆ. ತಾಯಿಯಾಗುತ್ತಿರುವ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ ಈ ನಟಿ ತಮ್ಮ ಅಪ್ಡೇಟ್ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಪ್ರಣಿತಾ, ತಮ್ಮ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಮ್ಮಂದಿರ ವಿಶೇಷ ದಿನವಾಗಿರುವುದರಿಂದ ಫೋಟೋವೊಂದನ್ನು ಶೇರ್ ಮಾಡಿ ತನ್ನ ಅಮ್ಮನನ್ನು ನೆನೆದಿದ್ದಾರೆ.
Advertisement
ಕ್ಯೂಟ್ ಬೆಡಗಿ ಪ್ರಣಿತಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಇಂದು ಮತ್ತೊಂದು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ, ನಾವು ಮಾತೃತ್ವದ ಪ್ರಯಾಣವನ್ನು ಪ್ರಾರಂಭಿಸುವವರೆಗೂ ನಮ್ಮ ಅಮ್ಮಂದಿರು ನಮಗಾಗಿ ಎಷ್ಟು ತ್ಯಾಗ ಮಾಡಿದ್ದಾರೆಂದು ನಮಗೆ ತಿಳಿದಿರುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಣಿತಾ ಮುದ್ದಾಗಿ ಕಾಣುತ್ತಿದ್ದಾರೆ. ಇದನ್ನೂ ಓದಿ: ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ: ಕಟೀಲ್
Advertisement
View this post on Instagram
Advertisement
ಈ ಸಾಲುಗಳನ್ನು ಓದಿದ ಅಭಿಮಾನಿಗಳು, ಇದು ಸತ್ಯ. ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಉಸಿರುಗಟ್ಟಿಸುವ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ.
Advertisement
ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಪತಿ ನಿತಿನ್ ರಾಜು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ನಟಿ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಜೊತೆಗೆ ವರ್ಕೌಟ್ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದರು. ಈ ವೀಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ