ಸ್ಯಾಂಡಲ್ವುಡ್ ಬ್ಯೂಟಿ ಪ್ರಣಿತಾ ಸುಭಾಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭೀಮನ ಅಮವಾಸ್ಯೆಯಂದು ಪತಿಯ ಪಾದ ಪೂಜೆ ಮಾಡಿರುವ ಫೋಟೋವೊಂದನ್ನ ಸಾಮಾಜಿಕ ಜಾಲತಾಲದಲ್ಲಿ ಶೇರ್ ಮಾಡಿದ್ದರು. ಇದೀಗ ಈ ಫೋಟೋ ಸಖತ್ ಟ್ರೋಲ್ ಆಗುತ್ತಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪ್ರಣಿತಾ ಸುಭಾಷ್ ಇದೀಗ ತಮ್ಮ ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಷೆಗೆ ಭೀಮನ ಅಮವಾಸ್ಯೆಯಂದು ಪತಿ ನಿತಿನ್ ರಾಜು ಅವರ ಪಾದದ ಪೂಜೆ ಮಾಡಿದ್ದರು. ಈ ಕುರಿತ ಫೋಟೋ ಶೇರ್ ಮಾಡಿದ್ದರು. ಬಳಿಕ ಈ ಫೋಟೋ ಟ್ರೋಲ್ ಮಾಡಲಾಯಿತು. ಈಗ ಟ್ರೋಲಿಗರಿಗೆ ನಟಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ
Advertisement
Bheemana amavasya ????
ಭೀಮನ ಅಮಾವಾಸ್ಯೆ pic.twitter.com/rCrJN3VJ2u
— Pranitha Subhash (@pranitasubhash) July 28, 2022
Advertisement
ನಾನು ಸಂಪ್ರದಾಯಿಕ ಆಚರಣೆ ಮತ್ತು ಪದ್ಧತಿಯನ್ನು ಅನುಸರಿಸುತ್ತೇನೆ. ಜನರಲ್ಲಿ ಎರಡು ರೀತಿಯಲ್ಲಿ ದೃಷ್ಟಿಕೋನವಿದೆ. 90%ರಷ್ಟು ಜನರು ಈ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾರೆ. ಒಳ್ಳೆದರ ಬಗ್ಗೆ ಯೋಚಿಸುತ್ತೇನೆ. ಚಿತ್ರರಂಗದಲ್ಲಿ ಇದ್ದ ಮಾತ್ರಕ್ಕೆ ನಾನು ನಮ್ಮ ಸಂಪ್ರದಾಯವನ್ನ ಫಾಲೋವ್ ಮಾಡಬಾರದು ಅಂತಾ ಎನಿಲ್ಲವಲ್ಲ. ಕಳೆದ ವರ್ಷವು ಕೂಡ ನಾನು ಭೀಮನ ಅಮವಾಸ್ಯೆ ಪೂಜೆ ಮಾಡಿದ್ದೆ, ಆದರೆ ಫೋಟೋ ಶೇರ್ ಮಾಡಿರಲಿಲ್ಲ. ಹಾಗಾಗಿ ಈ ವರ್ಷ ಪೂಜೆಯ ಫೋಟೋ ಶೇರ್ ಮಾಡಿದ್ದೇನೆ. ಈ ಮೂಲಕ ಟ್ರೋಲಿಗರಿಗೆ ಪ್ರಣಿತಾ ಉತ್ತರ ನೀಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]