ಹಾವೇರಿ: ಅರೆಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವನಾಂದ ಸ್ವಾಮೀಜಿ ಗಂಡು ಮಗುವಿನ ತಂದೆಯಾದ ಸಂತೋಷದಲ್ಲಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಮಠದ ಸ್ವಾಮೀಜಿ ಎರಡು ವರ್ಷಗಳ ಹಿಂದೆ ಸನ್ಯಾಸತ್ವ ತ್ಯಜಿಸಿ ಕೇರಳ ಮೂಲದ ಮೀರಾ ಎಂಬವರನ್ನು ಮದುವೆ ಆಗಿದ್ದರು. ಕಲಬುರಗಿ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಹಲವು ಮಠಾಧೀಶರ ಸಮ್ಮುಖದಲ್ಲಿ ಪ್ರಣವಾನಂದ ಸ್ವಾಮೀಜಿಗಳ ಮದುವೆ ನಡೆದಿತ್ತು.
ಕೇರಳದ ಕೋಝಿಕೋಡ್ ನ ಬಿಕಾಂ ವಿದ್ಯಾರ್ಥಿನಿಯಾಗಿದ್ದ ಮೀರಾ ಅವರು ಮದುವೆಗೆ ಮುನ್ನ ಲಿಂಗ ದೀಕ್ಷೆಯನ್ನು ಪಡೆದಿದ್ದರು. ನಮ್ಮಿಬ್ಬರ ಮದುವೆಗೆ ಎರಡು ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ನಾವು ಸಹ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆ ಆಗಿದ್ದೇವೆ ಎಂದು ಪ್ರಣವನಾಂದ ಸ್ವಾಮೀಜಿ ಹೇಳಿದ್ದರು.
ಅರೆಮಲ್ಲಾಪುರದ ಶರಣಬಸವೇಶ್ವರ ಪೀಠವು ಕಲಬುರ್ಗಿಯ ಶರಣಬಸವೇಶ್ವರ ಪೀಠದಂತೆ ಗೃಹಸ್ಥ ಪೀಠವಾಗಿದೆ. ಹೀಗಾಗಿ ಪೀಠದ ಸಂಪ್ರದಾಯದಂತೆ ಪ್ರಣವಾನಂದ ಸ್ವಾಮೀಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗಾಗಲೇ ಸ್ವಾಮೀಜಿ ಅವರ ಪುತ್ರನ ಫೋಟೋಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿವೆ. ಗಂಡು ಮಗು ಜನಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ವಾಮೀಜಿ ಪತ್ನಿ ಹಾಗು ಪುತ್ರನನ್ನು ನೋಡಲು ಕೇರಳಕ್ಕೆ ತೆರಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv