ಬೆಂಗಳೂರು: ಸಚಿವ ಮಧು ಬಂಗಾರಪ್ಪ (Madhu Bangarappa) ಬೆಂಬಲಿಗರು ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ (Pranavananda Swamiji) ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ನನಗೆ ಜೀವ ಬೆದರಿಕೆ ಇದೆ. ಇವತ್ತು ಪೊಲೀಸ್ ಕಮಿಷನರ್ ಭೇಟಿ ಮಾಡುತ್ತಿದ್ದೇನೆ. ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಬೇಕು: ಕೆಎನ್ ರಾಜಣ್ಣ
Advertisement
Advertisement
ಬಿ.ಕೆ.ಹರಿಪ್ರಸಾದ್ (B.K.Hariprasad) ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ? ಬೇರೆ ಸಮುದಾಯದವರು ಹೋರಾಟ ಮಾಡಿದ್ದರಲ್ವಾ. ಸಮುದಾಯಕ್ಕೆ ಮಧು ಬಂಗಾರಪ್ಪ ಕೊಡುಗೆಯೇನು ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.
Advertisement
ನಾರಾಯಣ ಗುರು ರಥ ಬಂದಾಗ ಒಂದು ಹಾರ ಹಾಕಿದ್ರಾ? ನಾನು ಸಮುದಾಯದ ಭೂಮಿ ಕೊಳ್ಳೆ ಹೊಡೆದಿಲ್ಲ. ಸೈಟ್ ಮಾಡಿ ಮಾರಾಟ ಮಾಡಿಲ್ಲ. ಬಿ.ಕೆ.ಹರಿಪ್ರಸಾದ್ ಕಳ್ಳತನ ಮಾಡಿಲ್ಲ. ಈಡಿಗ ಸಮುದಾಯವನ್ನು ಸರ್ಕಾರವೇ ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ?: ಹೆಚ್‍ಡಿಕೆ ಕಿಡಿ
Advertisement
ಸ್ವಾಮೀಜಿಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ. ನನ್ನ ಡಿಎನ್ಎ ವಿಚಾರ ನಿಮಗ್ಯಾಕೆ? ನಾನು ಸ್ವಾಮೀಜಿ ಅಲ್ಲ ಅಂತ ಹೇಳಲು ಹಕ್ಕು ಕೊಟ್ಟವರು ಯಾರು? ಸಮುದಾಯಕ್ಕೆ ಅನ್ಯಾಯವಾದ್ರೆ ಅದಕ್ಕೆ ನೀವೇ ಹೊಣೆ. ನಿಮ್ಮ ಹಿನ್ನೆಲೆ ಏನು ಅಂತ ನಿಮಗೆ ಗೊತ್ತಿದೆಯಾ? ನಿಮ್ಮ ಸಾಧನೆ ಏನು? ಈಗ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದೀರ. ಮುಂದೆ ಯಾವ ಪಕ್ಷಕ್ಕೆ ಹೋಗ್ತೀರಾ ಅಂತ ಗೊತ್ತಿಲ್ಲ. ಸಿದ್ದರಾಮಯ್ಯನವರು ಮಧು ಬಂಗಾರಪ್ಪ ಮಾತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಸ್ಪೀಕರ್ ಭೇಟಿ ಮಾಡಿ ಮಧು ಬಂಗಾರಪ್ಪ ವಿರುದ್ಧ ದೂರು ಕೊಡುತ್ತೇವೆ. ಕಾನೂನು ಹೋರಾಟ ಕೂಡ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ತಲೆಹರಟೆ, ಮದುವೆಯಾಗಿರುವವರು ಸ್ವಾಮೀಜಿಯೇ ಅಲ್ಲ ಎಂದು ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಮಧು ಬಂಗಾರಪ್ಪ ವಿರುದ್ಧ ಸ್ವಾಮೀಜಿ ಕಿಡಿಕಾರಿದರು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿ ಕರೆದುಕೊಂಡು ನಿಮ್ಮ ಮನೆಗೆ ಬಂದು ಭಿಕ್ಷೆ ಬೇಡಿಲ್ಲ. ನಾನು ಶರಣ ಸಂಸ್ಕೃತಿಯಂತೆ ಮದುವೆಯಾಗಿದ್ದೇನೆ ಎಂದು ಪ್ರಣವಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
Web Stories