ಮಂಡ್ಯ: ತೀವ್ರ ವಿರೋಧದ ನಡುವೆಯೂ ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಗೆ ಕ್ಷಣಗಣನೆ ಆರಂಭವಾಗಿದೆ. ಬೇಬಿ ಬೆಟ್ಟದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲು ಸೋಮವಾರ ಪರಿಶೀಲನೆಗೆ ಬಂದ ತಜ್ಞರ ವಿರುದ್ಧ ರೈತರು ಪರ, ವಿರೋಧ ಪ್ರತಿಭಟನೆಗಳು ತಾರಕಕ್ಕೇರಿದೆ.
Advertisement
ಬ್ಲಾಸ್ಟಿಂಗ್ ವಿರುದ್ಧ ರೈತರ ಸಂಘದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದ್ದಾರೆ. ಇದನ್ನು ಕಾವೇರಿಪುರದ ಬಳಿ ಪೊಲೀಸರು ತಡೆದ್ರು. ಈ ವೇಳೆ ವಾಕ್ಸಮರ ನಡೀತು. ಇದೇ ಹೊತ್ತಲ್ಲಿ ಕಾವೇರಿಪುರ ಗ್ರಾಮಸ್ಥರು ನಮಗೆ ಗಣಿಗಾರಿಕೆ ಬೇಕು, ಟ್ರಯಲ್ ಬ್ಲಾಸ್ಟ್ ಮಾಡಿ ಎಂದು ಆಗ್ರಹಿಸಿದ್ರು. ಎರಡು ಗುಂಪುಗಳ ಮಧ್ಯೆ ಜಟಾಪಟಿ ನಡೀತು. ಕೊನೆಗೆ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ರು. ಡಿಸಿ ನಡೆಸಿದ ಓಲೈಕೆ ಯತ್ನವೂ ವಿಫಲವಾಗಿದೆ. ಇದನ್ನೂ ಓದಿ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ – ಸಿಎಂ ಬೊಮ್ಮಾಯಿ ಅಂಕಿತ
Advertisement
Advertisement
ರೈತರು ಡಿಸಿ ಕಚೇರಿಯಲ್ಲಿಯೇ ಧರಣಿ ಕುಳಿತಿದ್ದಾರೆ. ಈ ಮಧ್ಯೆ ಮೈಸೂರಿನ ರಾಜಮನೆತನವೂ ಟ್ರಯಲ್ ಬ್ಲಾಸ್ಟಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಂಡ್ಯ ಡಿಸಿಗೆ ಪತ್ರ ಬರೆದಿದೆ. ನಮ್ಮ ಅನುಮತಿ ಪಡೆಯದೇ ಟ್ರಯಲ್ ಬ್ಲಾಸ್ಟ್ ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಪ್ರಮೋದಾದೇವಿ ತಗಾದೆ ತೆಗೆದಿದ್ದಾರೆ. ಕೂಡ್ಲೇ ಅನುಮತಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.