ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಕೆಡುಕು ಆಗುವುದಿಲ್ಲ: ಪ್ರಮೋದಾ‌ದೇವಿ ಒಡೆಯರ್

1 Min Read

– ನಾವು ಜ್ಯೋತಿಷ್ಯವನ್ನು ನಂಬಲ್ಲ, ಮುಹೂರ್ತ ಮೀರಿ ನಡೆಯಲ್ಲ
– ಅಂಬಾರಿ ಹೊರುವ ಮುನ್ನ ಪ್ರಶಾಂತ ಆನೆ ಬಗ್ಗೆ ನನಗೆ ಆತಂಕ ಇತ್ತು ಎಂದ ರಾಜಮಾತೆ

ಮೈಸೂರು: ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ರಾಜಮಾತೆ, ಇದರಿಂದ ನಾಡಿಗೆ ಕೆಡುಕು ಆಗುವುದಿಲ್ಲ. ಯಾರು ಈ ವಿಚಾರದಲ್ಲಿ ಆತಂಕ ಪಡಬೇಡಿ. ನಾವು ದೇವರನ್ನು ನಂಬಿದ್ದೇವೆ. ನಾವು ಜ್ಯೋತಿಷ್ಯವನ್ನ ನಂಬಿಲ್ಲ. ನಾವು ಜ್ಯೋತಿಷ್ಯ ನಂಬಿ ಪೂಜೆ ಮಾಡುವುದಿಲ್ಲ. ದೇವರನ್ನ ಮಾತ್ರ ನಂಬುತ್ತೇವೆ. ಏನೇನೊ ಅರ್ಥಗಳನ್ನ ಇದಕ್ಕೆ ಕಲ್ಪಿಸಬೇಡಿ. ಈ ವಿಚಾರದ ಬಗ್ಗೆ ಒಂದೆರೆಡು ದಿನದಲ್ಲಿ ನಾನೇ ವಿವರಣೆ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಜಂಬೂ ಸವಾರಿಗೆ ಪುಷ್ಪಾರ್ಚನೆ – ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ: ಸಚಿವ ಯತೀಂದ್ರ

ಎಲ್ಲದರ ವರದಿಯನ್ನ ನಾನು ತರಿಸಿಕೊಳ್ಳುತ್ತಿದ್ದೇನೆ. ಎಲ್ಲಿ ಏನೇನಾಯಿತು ಎಂಬುದು ನನಗೆ ಗೊತ್ತಾಗಿದೆ. ಆದರೂ, ಸಂಪೂರ್ಣ ಮಾಹಿತಿ ಬಂದ ಮೇಲೆ ಮಾತನಾಡುತ್ತೇನೆ. ನಮ್ಮ ಮನೆಯ ವಿಧಿವಿಧಾನಗಳು ಆಯಾ ಮೂಹರ್ತಕ್ಕೆ ನಡೆಯಬೇಕು. ಮೂಹರ್ತ ಮೀರಿ ನಾವು ನಡೆಸುವುದಿಲ್ಲ. ಹೀಗಾಗಿ, ಜೆಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆ. ನಾನು ಈ ವಿಚಾರದಲ್ಲಿ ಯಾವ ಜ್ಯೋತಿಷ್ಯವನ್ನ ಕೇಳಿಲ್ಲ. ಎಲ್ಲ ದೇವರ ಮೇಲೆ ಭಾರ ಹಾಕಿದ್ದೇವೆ. ಹೀಗಾಗಿ, ನಾನು ಆತಂಕಕ್ಕೆ ಒಳಗಾಗಿಲ್ಲ ಎಂದರು.

ಅಂಬಾರಿ ಆನೆ ವಿಚಾರವಾಗಿ ಮಾತನಾಡಿ, ನನಗೆ ಪ್ರಶಾಂತ ಆನೆಯ ಬಗ್ಗೆ ಆತಂಕ ಇತ್ತು. ಯಾವ ರೀತಿಯಾಗಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೋ, ಯಾವ ರೀತಿ ನಡೆಯುತ್ತಾನೊ ಎಂಬ ಆತಂಕ. ಹಿಂದೆ ನನಗೆ ಈ ರೀತಿ ಯಾವ ಆತಂಕ ಇರಲಿಲ್ಲ. ಈ ಬಾರಿಯೇ ನನಗೆ ಅಷ್ಟು ಆತಂಕ ಇತ್ತು. ಎಲ್ಲಾ ಆತಂಕ ಮೀರಿ ಪ್ರಶಾಂತ ಚೆನ್ನಾಗಿ ಅಂಬಾರಿ ಹೊತ್ತಿದ್ದಾನೆ. ನನಗೆ ಬಹಳ ಸಂತೋಷ ಆಗಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ. ನನಗೆ ಸಂತಸ ತಂದಿದೆ ಎಂದು ಹೇಳಿದರು. ಇದನ್ನೂ ಓದಿ: ಅಂಬಾರಿ ಹೊತ್ತ ಬೆನ್ನಿಗೆ ವಿದಾಯದ ಭಾರ – ಕಾಡಿನತ್ತ ಹೊರಟ ಗಜಪಡೆ

Share This Article
Exit mobile version