ಚಾಣಾಕ್ಷತನ, ಚಾಲಾಕಿತನದ ಆಟಕ್ಕೆ ಒಂದೇ ವಾರದಲ್ಲಿ ಸೌಂದರ್ಯ ಶೆಟ್ಟಿಗೆ (Soundarya Shetty) ಡಬಲ್ ಧಮಾಕಾ ಒಲಿದಿದ್ದು, ವಾರದ ಉತ್ತಮ ಹಾಗೂ ಕ್ಯಾಪ್ಟನ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ.
ಬಿಗ್‌ಬಾಸ್ (Bigg Boss) ಮನೆಯಲ್ಲಿ ಈ ವಾರ ಸೌಂದರ್ಯ ಶೆಟ್ಟಿ ಅವರಿಗೆ ಡಬಲ್ ಧಮಾಕಾ ಸಿಕ್ಕಿದೆ. ತಮ್ಮ ಅತ್ಯುತ್ತಮ ಆಟ ಹಾಗೂ ಚಾಣಾಕ್ಷತೆಯ ಮೂಲಕ ಒಂದೇ ವಾರದಲ್ಲಿ ಉತ್ತಮ ಆಟಗಾರ್ತಿ ಹಾಗೂ ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಇದನ್ನೂ ಓದಿ: ಕ್ರೈಂ, ಥ್ರಿಲ್ಲರ್ ಸಿನಿಮಾದಂತೆ ರೋಚಕವಾಗಿ ಕಂಡುಬಂದ ಲೂಟಿಕೋರರು ವರ್ಸಸ್ ರಕ್ಷಕರು ಟಾಸ್ಕ್
ಈ ವಾರದ Captain – ಸೌಂದರ್ಯ ಶೆಟ್ಟಿ
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKBBKCaptain https://t.co/jm6lNljjcj
— Colors Kannada (@ColorsKannada) October 23, 2026
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಲೂಟಿಕೋರರು ಹಾಗೂ ರಕ್ಷಕರು ಎಂಬ ಟಾಸ್ಕ್‌ವೊಂದನ್ನು ಬಿಗ್‌ಬಾಸ್ ನೀಡಿದ್ದರು. ಆಟದಲ್ಲಿ ಲೂಟಿಕೋರರ ತಂಡ ವಜ್ರ ಹಾಗೂ ಕಿರೀಟವನ್ನು ಕಳ್ಳತನ ಮಾಡಿ, ಟಾಸ್ಕ್ ಅನ್ನು ಗೆದ್ದಿದೆ. ಆಟದಲ್ಲಿ ತಮ್ಮ ಚಾಣಾಕ್ಷ್ಯತನ, ಚಾಲಾಕಿತನ ಎಲ್ಲವನ್ನೂ ಉಪಯೋಗಿಸಿ, ಮನರಂಜನೆ ನೀಡಿದ್ದಾರೆ ಎಂದು ಮನೆಯವರ ಬಹುಮತದೊಂದಿಗೆ ವಾರದ ಉತ್ತಮ ಆಟಗಾರ ಎಂಬ ಪದಕವನ್ನು ಸೌಂದರ್ಯ ಶೆಟ್ಟಿಪಡೆದುಕೊಂಡಿದ್ದಾರೆ.
ಗೆದ್ದ ತಂಡ ಕ್ಯಾಪ್ಟನ್ಸಿ ರೇಸ್‌ನಲ್ಲಿತ್ತು. ಅದರಂತೆ ಮೊದಲ ಟಾಸ್ಕ್‌ನಲ್ಲಿ ಗೆದ್ದು ಆಸಿಯಾ ಹಾಗೂ ಸೌಂದರ್ಯ ಕೊನೆಯ ಹಂತಕ್ಕೆ ತಲುಪಿದ್ದರು. ಬ್ಯಾಲೆನ್ಸ್ ಮಾಡುವ ಆಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸೌಂದರ್ಯ ಶೆಟ್ಟಿ ಟಾಸ್ಕ್ ಗೆದ್ದು 2ನೇ ವಾರದ ಕ್ಯಾಪ್ಟನ್ ಆಗಿದ್ದಾರೆ.
ಈ ವಾರದ ಉತ್ತಮ – ಸೌಂದರ್ಯ ಶೆಟ್ಟಿ
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKBBKUttama https://t.co/0vNlIDh9ZH
— Colors Kannada (@ColorsKannada) October 23, 2026
ಮನೆಯಲ್ಲಿ ನಡೆದ `ಲೂಟಿಕೋರರು ಮತ್ತು ರಕ್ಷಕರು’ ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ತಮ್ಮ ತಂತ್ರಗಾರಿಕೆ ಹಾಗೂ ಮನರಂಜನಾತ್ಮಕ ಆಟದಿಂದ ಎಲ್ಲರ ಗಮನ ಸೆಳೆದಿದ್ದರು. ಟಾಸ್ಕ್ ವೇಳೆ ತಮ್ಮ ಏಕಾಗ್ರತೆ ಮತ್ತು ಚಾತುರ್ಯದಿಂದ ಗೆದ್ದುಬಂದು ಅಂತಿಮವಾಗಿ ಕ್ಯಾಪ್ಟನ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಒಟ್ಟಾರೆ ಈ ವಾರ ಸೌಂದರ್ಯ ಶೆಟ್ಟಿ ಅವರು ತಮ್ಮ ಪವರ್‌ಫುಲ್ ಆಟದ ಮೂಲಕ ಬಿಗ್‌ಬಾಸ್ ಮನೆಯಲ್ಲಿ ಹವಾ ಸೃಷ್ಟಿಸಿದ್ದು, ಅಭಿಮಾನಿಗಳಿಂದಲೂ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: ಆಸಿಯಾ Vs ಸೌಂದರ್ಯ; ಯಾರಾಗ್ತಾರೆ ಕ್ಯಾಪ್ಟನ್?
