ಮೈಸೂರು: ಮಹಾರಾಜರ ನಂತರ ನಮ್ಮ ಸರ್ಕಾರವೇ ಹೆಚ್ಚು ಕೆಲಸ ಮಾಡಿದ್ದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇಂದು ಯದುವಂಶದ ಪ್ರಮೋದ ದೇವಿ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಯಾರ ಆಡಳಿತ ಹೇಗಿತ್ತು ಎಂಬುದು ಜನ ತೀರ್ಮಾನ ಮಾಡುತ್ತಾರೆ. ಸಿಎಂ ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಆಡಳಿತಗಳ ಬಗ್ಗೆ ಜನ ತೀರ್ಮಾನ ಕೊಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
Advertisement
ನಿನ್ನೆ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂದಿನ ಕಾಲಘಟ್ಟದ ಆಡಳಿತವೇ ಬೇರೆ, ಇವತ್ತಿನ ಕಾಲಘಟ್ಟದ ಆಡಳಿತವೇ ಬೇರೆ. ಯಾರ ಆಡಳಿತ ಹೇಗಿತ್ತು ಎಂಬುದು ಜನರ ತೀರ್ಮಾನಕ್ಕೆ ಬಿಟ್ಟದ್ದು ಎಂದು ಪ್ರತಿಕ್ರಿಯಿಸಿದ್ದರು. ಸಿಎಂ ಅವರ ಈ ಹೇಳಿಕೆ ಬಗ್ಗೆ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ತೀವ್ರ ಖಂಡನೆ ಕೂಡ ವ್ಯಕ್ತಪಡಿಸಿದ್ದರು.
Advertisement
ಮಾರ್ಚ್ 10 ರಂದು ಮೈಸೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸರ್ಕಾರದ ಕೊಡುಗೆಗಳನ್ನು ತಿಳಿಸಿದ್ದರು. ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
Advertisement
ಮೈಸೂರು ಜಿಲ್ಲೆಗೆ ನಮ್ಮ ಸರ್ಕಾರದಿಂದ 5 ಸಾವಿರ ಕೋಟಿ ರೂ. ಹಣ ನೀಡಿದ್ದೇವೆ. ಸ್ವಾತಂತ್ರ್ಯ ಭಾರತದಲ್ಲಿ ಇಷ್ಟು ಹಣ ಕೊಟ್ಟ ಸರ್ಕಾರ ಇಲ್ಲವೇ ಇಲ್ಲ. ಮೈಸೂರಿನ ಪರಂಪರೆ ಉಳಿಸಿಕೊಂಡು ಕಟ್ಟಡಗಳನ್ನ ನಿರ್ಮಿಸಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದ್ದರು.