ಗದಗ: ನಮ್ಮ ದೇಶದಲ್ಲಿ ಹುಟ್ಟಿ, ನಮ್ಮದೇ ಅನ್ನ ತಿಂದು, ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಅಂತಹವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.
ಗಜೇಂದ್ರಗಡ (Gajendragada) ಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಮಹಾ ಗಣೇಶ ಉತ್ಸವ ಧರ್ಮ ಸಭೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಹಿಂದೂ ವಿರೋಧಿಗಳು, ದ್ರೋಹಿಗಳು ಯಾರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ತಿಂದು, ನಮ್ಮ ದೇಶದ ಸೌಲಭ್ಯ ಪಡೆದು ಪಾಕಿಸ್ತಾನ ಜಿಂದಾಬಾದ್ ಅನ್ನುವ ಹರಾಮ್ ಕೋರ್ ಇದ್ದಾರೆ. ಅಂತವರ ವಿರುದ್ಧ ಹೋರಾಟ ನಮ್ಮದು ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಭಾರತ-ಪಾಕ್ ಮ್ಯಾಚ್ ರದ್ದು ಮಾಡಿಸ್ತಿದ್ವಿ: ಪ್ರದೀಪ್ ಈಶ್ವರ್
ಪಾಕಿಸ್ತಾನ ಜಿಂದಾಬಾದ್ ಅನ್ನುವ ಕಿಡಿಗೇಡಿ ಗೂಂಡಾ ಮುಸ್ಲಿಮರಿಗೆ ಹೇಳ್ತೇನೆ. ನಿಮಗೆ ಪಾಕಿಸ್ತಾನದ (Pakistan) ಬಗ್ಗೆ ಪ್ರೀತಿ ಇದ್ರೆ. ಬಾಗಿಲು ಓಪನ್ ಇದೆ, ನಾವೇ ಟಿಕೆಟ್ ಕೊಟ್ಟು ಕಳುಹಿಸುತ್ತೇವೆ ಅಲ್ಲಿಗೆ ಓಡಿ. ಪಾಕಿಸ್ತಾನ ಭಿಕಾರಿಯಾಗಿದೆ. ನಮ್ಮ ದೇಶದಲ್ಲಿ ಹುಟ್ಟಿ, ನಮ್ಮದೇ ಅನ್ನ ತಿಂದು, ಸೌಲಭ್ಯಗಳನ್ನು ಪಡೆದು, ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಮನೆ ನುಗ್ಗಿ ಹೊಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಪಾಕ್ ಹೇಳಿಕೆ ಗಮನಿಸಬೇಕು, ಪಂದ್ಯ ನಡೆಸಬಾರದಿತ್ತು: ಬೊಮ್ಮಾಯಿ ಬೇಸರ
ಹಿಂದೂ ಸಮಾಜ ಶಾಂತವಾಗಿ ಸಮಾಧಾನದಿಂದ ಇದೆ. ಅಣ್ಣ, ತಮ್ಮಂದಿರ ಹಾಗೆ ಬದುಕಬೇಕು ಅಂತ 78 ವರ್ಷದಿಂದ ಸಹನೆಯಿಂದ ಇದ್ದೇವೆ. ಈ ದೇಶವನ್ನು ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಕಮ್ಯೂನಿಸ್ಟ್ ಮಾಡಲು ಹೊರಟಿದ್ದಾರೆ. ಗಜಾನನ ಉತ್ಸವ ಮೂಲಕ ಹಿಂದೂ ಸಂಘಟನೆಗಳು ಒಂದಾಗಬೇಕಿದೆ. ಮದ್ದೂರಿನ ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆಯುತ್ತಾರೆ. ಎಷ್ಟು ಸೊಕ್ಕು ನಿಮಗೆ ಈ ದೇಶದ ಅನ್ನ ತಿಂದು ಗಣೇಶ ಉತ್ಸವ ಮೇಲೆ ಕಲ್ಲು ಎಸೆಯುತ್ತೀರಾ? ಒಂದು ವರ್ಷದ ಹಿಂದೆ ನಾಗಮಂಗಲ ಸೇರಿದಂತೆ ಅನೇಕ ಕಡೆ ಗಲಾಟೆಗಳಾಗಿವೆ. ಹಿಂದೂ ಹಬ್ಬಗಳ ಮೇಲೆಯೇ ಕಲ್ಲು, ಕಟ್ಟಿಗೆ, ಪೆಟ್ರೋಲ್, ತಲ್ವಾರ್ ತೆಗೆದುಕೊಂಡು ಹಲ್ಲೆ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಇಷ್ಟು ದಿನ ಶಾಂತಿ, ಶಾಂತಿ ಅಂತ ಗಾಂಧೀಜಿ ರೀತಿ ಭಜನೆ ಮಾಡ್ತಾ ಕೂತಿದ್ದೆವು. ಇನ್ನು ಹಾಗಿಲ್ಲ, ಕ್ರಾಂತಿ ಒಂದೇ. ಇನ್ಮುಂದೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ವೀರ ಸಾವರ್ಕರ್, ಶಿವಾಜಿ ಮಹಾರಾಜ್ ಕ್ರಾಂತಿ ನಡೆಯುತ್ತದೆ. ನಮ್ಮ ದೇಶ, ನಮ್ಮ ಧರ್ಮ, ನಮ್ಮ ಮೆರವಣಿಗೆ, ಉತ್ಸವ ಮೇಲೆ ಕಲ್ಲು ಎಸೆದ್ರೆ, ಇನ್ಮುಂದೆ ಮನವಿ, ಬಂದ್‌ಗೆ ಕರೆ, ಧರಣಿ ಇದ್ಯಾವುದು ಇಲ್ಲ. ಯಾರೇ ಆದ್ರೂ ಗಣೇಶ ವಿಸರ್ಜನೆ ವೇಳೆ ಕಲ್ಲು ಎಸೆದ್ರೆ, ಹಿಂದೂ ದೇವಸ್ಥಾನ, ಹಿಂದೂ ಹುಡುಗಿಯರ ಅಪಹರಣ ಮಾಡಲು ಪ್ರಯತ್ನ ಮಾಡಿದ್ರೆ, ಅವರಿಗೆ ಸರಿಯಾಗಿ ಉತ್ತರ ಕೊಡುವ ಕಾಲ ಬಂದಿದೆ ಎಂದು ಹೇಳಿದ್ದಾರೆ.
ಇನ್ಮುಂದೆ ಹಿಂದೂ ಸಮಾಜ ಅಳುವಂತಿಲ್ಲ. ಹಿಂದೂಗಳು ಓಡಿ ಹೋಗುವಂತಿಲ್ಲ. ನಾವು ಓಡಿದ್ದು, ಸಾಯುವುದು ಸಾಕಾಗಿದೆ. ಕಾಶ್ಮೀರ, ಅಸ್ಸಾಂ, ಕೇರಳದಿಂದ ಓಡಿ ಹೋಗ್ತಿದ್ದೆವು. ಇನ್ಮುಂದೆ ಎಲ್ಲಿಗೆ ಓಡಿ ಹೋಗಲ್ಲ ಎಂದು ಉದ್ರೇಕದ ಮಾತುಗಳನ್ನಾಡಿದ್ದಾರೆ.