ಉಡುಪಿ: ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ ರಾಷ್ಟ್ರೀಯತೆ ಬಿತ್ತಬೇಕಿತ್ತು. ಆದರೆ ಕಾಂಗ್ರೆಸ್ ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿದ್ದು ಇದಕ್ಕೆ ಕಾರಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದರು.
ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡ ಪಿಎಫ್‍ಐನ (PFI) ಗೋಡೆ ಬರಹಕ್ಕೆ ಪ್ರತಿಕ್ರಿಯಿಸಿದ ಅವರು, ಪಿಎಫ್‍ಐ ಬ್ಯಾನ್, ಬಂಧನದಿಂದ ಇವರ ಆಟ ಮುಗಿಯುವುದಿಲ್ಲ. ಪಿಎಫ್‍ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ ಷಡ್ಯಂತ್ರ ದೇಶದ್ರೋಹಿ ಪ್ರವೃತ್ತಿ ಬ್ಯಾನ್‍ನಿಂದ ತಡೆಯಲು ಸಾಧ್ಯವಿಲ್ಲ. ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿ, ಭಯೋತ್ಪಾದನ ಕೊಲೆ ಗಲಭೆಗಳು ಕಾಂಗ್ರೆಸ್‍ನ (Congress) ತುಷ್ಟೀಕರಣದ ಕೊಡುಗೆಯಾಗಿದೆ. ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ಶೇ.99 ನಂಬಿಕೆ ನನ್ನಲ್ಲಿಲ್ಲ ಎಂದು ಹೇಳಿದರು.
Advertisement
Advertisement
ಪಿಎಫ್‍ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಪೊಲೀಸ್ ಗುಪ್ತಚರ ಇಲಾಖೆ ಸರಕಾರ ಅಲರ್ಟ್ ಆಗಬೇಕು. ಬಂಟ್ವಾಳದ ಬರಹ ಒಂದು ಎಚ್ಚರಿಕೆಯಾಗಿದೆ. ಪಿಎಫ್‍ಐ ಇನ್ನೂ ಸಕ್ರೀಯವಾಗಿದೆ ಅನ್ನೋದರ ಸಂಕೇತ ಇದಾಗಿದೆ. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದರು.
Advertisement
Advertisement
ಮೋಹನ್ ಭಾಗವತ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‍ಎಸ್ (RSS) ನಾಯಕರು ಮಸೀದಿಗೆ ಭೇಟಿ ಕೊಟ್ಟು ಮನಃಪ್ರವರ್ತನೆ ಆಗುತ್ತದೆ ಎಂದು ನಾನು ಒಪ್ಪಲ್ಲ. ನಮ್ಮ ಶತ್ರು ಯಾರು ಮಿತ್ರ ಯಾರು ಎಂದು ಹಿಂದೂ ಸಮಾಜಕ್ಕೆ ಸ್ಪಷ್ಟ ಕಲ್ಪನೆ ಇಲ್ಲ. ಹಿಂದೂಗಳು ಸಾವಿರಾರು ವರ್ಷದಿಂದ ಸೌಹಾರ್ದತೆಯಲ್ಲೇ ಇದ್ದೇವೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಮಸೀದಿ ಮದರಸಾಕ್ಕೆ ಹೋಗಿ ಮನವರಿಕೆ ಮಾಡುತ್ತೇವೆ ಎಂಬುದು ಅಸಾಧ್ಯದ ಮಾತು. ಹಿಂದೂ ಬಲಕ್ಕೆ ಪ್ರತಿಬಲವಾಗಿ ಬೆಳೆಯಬೇಕು ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ಅಸಮಾನತೆ ಆರ್‌ಎಸ್‍ಎಸ್‍ನ ಮುಖಂಡ ಹೊಸಬಾಳೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದತ್ತಾತ್ರೇಯ ಹೊಸಬಾಳೆ ಆರ್‌ಎಸ್‍ಎಸ್ 2ನೇ ಸ್ಥಾನ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅಧ್ಯಯನ ಮಾಡಿಯೇ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಹೇಳಿದ್ದಾರೆ. ಯಾವುದೇ ಟೀಕೆ, ದ್ವೇಷ ಮಾಡಲು ಅವರು ರಾಜಕೀಯ ವ್ಯಕ್ತಿಯಲ್ಲ. ದೇಶದ ಬಗ್ಗೆ ಕಳಕಳಿ ಮತ್ತು ವೇದನೆಯಿಂದ ಹೇಳಿದ್ದಾರೆ. ಸಿಟ್ಟು ಮತ್ತು ತಪ್ಪು ಸಂದೇಶ ನೀಡುವ ಉದ್ದೇಶ ಹೊಸಬಾಳೆಗೆ ಇರುವುದಿಲ್ಲ ಎಂದು ಹೊಸಬಾಳೆ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ದಸರಾ ಜಂಬೂಸವಾರಿಗೆ ಚಾಲನೆ – ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ ಅಭಿಮನ್ಯು
ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯ (BJP) ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕು. ನಡೆದದ್ದೇ ದಾರಿ ಎಂದು ಬಿಜೆಪಿ ಭಾವಿಸುವ ಅಪಾಯವಿದೆ. ಆರ್ಥಿಕ ಅಸಮಾನತೆ ವಿಚಾರದಲ್ಲಿ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಹೊಸಬಾಳೆ ಹೇಳಿಕೆಯನ್ನು ಸ್ವೀಕರಿಸಿ ಸುಧಾರಣೆ ಹಾದಿಯಲ್ಲಿ ಬಿಜೆಪಿ ಬೆಳೆಯಬೇಕು ಎಂದರು. ಇದನ್ನೂ ಓದಿ: ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ