ಕಲಬುರಗಿ: ಜಿಲ್ಲೆಯ ಆಳಂದ (Aland) ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯರು ಪ್ರತಿಷಠಾಪನೆ ಮಾಡಿದ ಈಶ್ವರ ಲಿಂಗವಿದೆ. ಈ ಹಿಂದೆ ಕೋರ್ಟ್ ಇಲ್ಲಿ ಪೂಜೆಗೆ ಅನುಮತಿ ನೀಡಿದೆ. ಈ ಜಾಗದಲ್ಲಿ ನಾವು ಶಿವರಾತ್ರಿ ದಿನ ಗುದ್ದಲಿ ಪೂಜೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ನಗರದಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮದೇ ಸ್ಥಾನ, ಮುಸ್ಲಿಂ ಸಮುದಾಯ ಅತಿಕ್ರಮಣ ಮಾಡಿಕೊಂಡು, ದರ್ಗಾ ಮಾಡಿ ಉರುಸ್ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಪೂಜೆಗೆ ಕೋರ್ಟ್ ಅನುಮತಿ ಕೊಟ್ಟಿದೆ. ನಾವು ಶಿವರಾತ್ರಿ ದಿನ ಇಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?
Advertisement
Advertisement
ಸಂಸದ ಡಿ.ಕೆ ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ವಿಚಾರವಾಗಿ, ದೇಶ ತುಂಡು ಮಾಡೋದು ದೇಶ ದ್ರೋಹದ ಹೇಳಿಕೆಯಾಗಿದೆ. ದೇಶ ತುಂಡು ಮಾಡೋಕೆ ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ? ಆರ್ಥಿಕತೆ ಹೆಸರಲ್ಲಿ ದೇಶ ತುಂಡು ಮಾಡೋದಾದ್ರೆ, ಸ್ವಾತಂತ್ರ್ಯ ಹೋರಾಟ ಯಾಕೆ ಮಾಡಬೇಕಾಗಿತ್ತು? ನೀವು ಕಾಂಗ್ರೆಸ್‍ನವರು ಆಗ ಹೋರಾಟ ಮಾಡಿರೋದು, ಇವಾಗ ದೇಶ ಒಡೆಯೋದಕ್ಕಾ ಹೇಗೆ ಎಂದು ಪ್ರಶ್ನಿಸಿದರು. ಈಗ ದಕ್ಷಿಣ ಭಾರತ ಒಡೆಯೋದು ಎಂದರೆ ಏನು? ಆ ಹಿನ್ನೆಲೆಯಲ್ಲಿ ಈಶ್ವರಪ್ಪ ಒಬ್ಬ ದೇಶಭಕ್ತನಾಗಿ ನೋವು ತಡೆಯಲಾರದೆ ಹೇಳಿದ್ದಾರೆ. ನಾನು ಈಶ್ವರಪ್ಪ ವಿಚಾರ ಬೆಂಬಲಿಸುತ್ತಿದ್ದೇನೆ. ರಾಜಕಾರಣಿಗಳಿಗೆ ಒಂದೇ ಅಸ್ತ್ರ ಇರೋದು, ಪೊಲೀಸ್ ಠಾಣೆ, ಹೆದರಿಸೋದು ಬೇದರಿಸೋದು ಇದೇ ಉದ್ಯೋಗವಾಗಿದೆ. ನೈತಿಕವಾಗಿ, ಬೌದ್ಧಿಕವಾಗಿ ಚರ್ಚೆ ಮಾಡುವ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಹಿಂದೂಗಳ ತೆರಿಗೆ ಹಿಂದೂಗಳಿಗೆ ಎಂಬ ಶಾಸಕ ಹರಿಶ್ ಪುಂಜಾ ಹೇಳಿಕೆ ವಿಚಾರವಾಗಿ, ಹಿಂದೂಗಳ ತೆರಿಗೆ ಹಿಂದೂಗಳಿಗೆ, ಮುಸ್ಲಿಮರ ತೆರಿಗೆ ಮುಸ್ಲಿಮರಿಗೆ ಎನ್ನುವುದು ಸರಿಯಲ್ಲ. ಮೋದಿಯವರು ರಾಷ್ಟ್ರವನ್ನು ಸಮಾನತೆಯಿಂದ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಸಮಾನತೆಯಿಂದ ಯಾವ ಬೇಧ-ಭಾವ ಇಲ್ಲದೇ 10 ವರ್ಷ ನಡೆಸಿಕೊಂಡು ಬಂದಿದ್ದಾರೆ. ಹೀಗೆ ಪ್ರತಿಯೊಬ್ಬರೂ ತಮ್ಮ ಟ್ಯಾಕ್ಸ್ ಮೂಲಕ ಜೀವನ ನಡೆಸುತ್ತೇವೆ ಎಂದರೆ ಅದು ಮೂರ್ಖತನದ ಹೇಳಿಕೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಪೋಷಕರು ನನಗೆ ಮತ ಹಾಕದಿದ್ರೆ 2 ದಿನ ಊಟ ಮಾಡ್ಬೇಡಿ- ಶಾಸಕರ ವಿವಾದಾತ್ಮಕ ಹೇಳಿಕೆ