ಧಾರವಾಡ: ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವ ಕ್ರಮವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತೀವ್ರವಾಗಿ ಖಂಡಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ನನ್ನ ಬಲಿದಾನವಾದರೂ ಸರಿ ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಒಪ್ಪುವುದಿಲ್ಲ. ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ವಿರೋಧ ಮಾಡುತ್ತೇನೆ. ಈ ಸಂಬಂಧ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಅದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ರೌಡಿಗಳ ಪಕ್ಷ.. ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದವರು – ಈಶ್ವರಪ್ಪ ತಿರುಗೇಟು
Advertisement
Advertisement
ಕಾಂಗ್ರೆಸ್ (Congress) ಪಕ್ಷ ಮುಸ್ಲಿಮರಿಗೆ ಸಪೋರ್ಟ್ ಮಾಡಿದ ಪರಿಣಾಮವಾಗಿ ಬಿಜೆಪಿಯವರು (BJP) ಹೀಗೆ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ನೀತಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ. ಅದರಂತೆ ಬಿಜೆಪಿ ಕೂಡ 10 ಮುಸ್ಲಿಂ ಕಾಲೇಜುಗಳನ್ನು ಪ್ರತ್ಯೇಕವಾಗಿ ಕೊಡುವುದು ತಪ್ಪು. ಹಿಜಬ್‌ನ ಸಲುವಾಗಿ ಮುಸ್ಲಿಂ ಕಾಲೇಜುಗಳನ್ನು ಕೊಡುವುದು ತಪ್ಪು. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬೇಡಿ – ಅಮೆರಿಕಗೆ ಚೀನಾ ವಾರ್ನಿಂಗ್