ಮತಾಂತರ ಮಾಡುತ್ತಿರುವವರನ್ನು ಒದ್ದು ಓಡಿಸಬೇಕು: ಪ್ರಮೋದ್ ಮುತಾಲಿಕ್

Public TV
1 Min Read
Pramod Muthalik

ದಾವಣಗೆರೆ: ಬ್ರಿಟಿಷ್‍ರು ಬಂದಾಗಿ ನಿಂದ ನಮ್ಮ ದೇಶದಲ್ಲಿ ಮತಾಂತರ ನಡೆಯುತ್ತಲೇ ಬರುತ್ತಿದೆ. ಎಂಎಲ್‍ಎ ಗೂಳಿಹಟ್ಟಿ ಡಿ ಶೇಖರ್ ರವರ ತಾಯಿಯನ್ನೇ ಕ್ರಿಶ್ಚಿಯನ್‍ಗೆ ಮತಾಂತರ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತಾಂತರ ವಿರುದ್ಧ ಗುಡುಗಿದ್ದಾರೆ.

Pramod Muthalik 2

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮತಾಂತರ ಪ್ರಕ್ರಿಯೆ ಸುದೀರ್ಘವಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರ ಈ ಕೂಡಲೇ ಮತಾಂತರ ತಡೆ ಕಾನೂನು ತರಬೇಕಾಗಿದೆ. ಟೊಳ್ಳು ಕಾನೂನು ತರದೇ ಕಟ್ಟುನಿಟ್ಟಿನ ಕಾನೂನು ರಾಜ್ಯ ಸರ್ಕಾರ ಜಾರಿ ತರಲಿ, ಮತಾಂತರ ಬಗ್ಗೆ ದೂರು ಬಂದ ತಕ್ಷಣ ಸಂಬಂಧಪಟ್ಟವರನ್ನು ಬಂಧಿಸಬೇಕು. ಒಂದು ವರ್ಷ ಜಾಮೀನು ನಿರಾಕರಣೆ ಮಾಡಬೇಕು ಎಂದು ದಾವಣಗೆರೆಯಲ್ಲಿ ಪ್ರಮೋದ್ ಮುತಾಲಿಕ್ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

Pramod Muthalik 1

ಈ ಮತಾಂತರ ಎಂಬ ಪಿಡುಗು ಹಳ್ಳಿ ಹಳ್ಳಿಗಳಿಗೆ ತಲುಪಿದ್ದು, ಎಲ್ಲಾ ಹಿಂದೂ ಸಮಾಜದವರನ್ನ ಮತಾಂತರ ಮಾಡಲಾಗುತ್ತಿದೆ. ಕೋಲಾರದಲ್ಲಿ ಒಂದು ಲಕ್ಷ ಒಕ್ಕಲಿಗರಾದ ಗೌಡ್ರನ್ನು ಮತಾಂತರ ಆಗಿದ್ದಾರೆ. ವ್ಯವಸ್ಥಿತವಾಗಿ ಮತಾಂತರ ಜಾಲ ನಡೆಯುತ್ತಿದ್ದು, ಮೊದಲು ಇಂತವರನ್ನ ಒದ್ದು ಹೋಡಿಸಬೇಕು ಎಂದು ಮುತಾಲಿಕ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *