ಉಡುಪಿ: ಸಲಿಂಗಿ ವಿವಾಹ (Same Sex Marriage) ಕುರಿತಾಗಿ ಇಂದು ಸುಪ್ರೀಂಕೋರ್ಟ್ (Supreme Court) ತೀರ್ಪು ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ಧ ಎಂದರು.ಇದನ್ನು ನಾನು ಒಪ್ಪಲ್ಲ. ಅತ್ಯಂತ ಅಸಹ್ಯವಾದ ಪ್ರಕ್ರಿಯೆ, ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ. ಸಂಗಿಂಗ ವಿವಾಹದ ವಿರುದ್ಧ ಕೇಂದ್ರ ವಾದವನ್ನು ಮಂಡಿಸಿದ್ದು, ಕೇಂದ್ರ ಸರ್ಕಾರದ ನಿಲುವು ಸರಿಯಿದೆ. ಸೃಷ್ಟಿಯ ವಿರುದ್ಧ ಕ್ರಿಯೆಗೆ ಕಾನೂನು ಮುದ್ರೆ ಸರಿಯಲ್ಲ. ಮದುವೆ ಪವಿತ್ರವಾದ ಬಂಧನ, ಅದಕ್ಕೆ ಕಳಂಕ ಬೇಡ. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಸಲಿಂಗಿ ಮದುವೆ ಬೇಡ ಎಂದರು. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪಿನಲ್ಲಿ ಏನಿದೆ?
ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಿ: ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ವಿಚಾರದಲ್ಲಿ ಧರ್ಮದಂಗಲ್ ನಡೆಯುತ್ತಿದೆ. ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಒತ್ತಾಯಿಸಿದೆ. ದೇಗುಲದ ಆವರಣದಲ್ಲಿ ಎಲ್ಲಾ ಸಮುದಾಯದವರಿಗೆ ವ್ಯಾಪಾರಕ್ಕೆ ಸಮಿತಿ ಅವಕಾಶ ಕೊಟ್ಟಿದೆ. ಈ ಬಗ್ಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಉಡುಪಿಯಲ್ಲಿ ಮಾತನಾಡಿದ್ದಾರೆ. ವಿಹಿಂಪ ಹೋರಾಟಕ್ಕೆ ನನ್ನ ಬೆಂಬಲ ಇದೆ. ಆಸ್ತಿಕತೆ ಬೇಡ , ಹಿಂದೂ ಗಳ ವ್ಯಾಪಾರ ಬೇಕು, ಲಾಭ ಬೇಕು ಅಂದ್ರೆ ಹೇಗೆ? ಗೋಪೂಜೆ ನಡೆಯುವ ದೇವಸ್ಥಾನದಲ್ಲಿ ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲಾಹ್ ಒಬ್ಬನೇ ದೇವರು ಅನ್ನೋರಿಗೆ ಬಹುದೇವ ಉಪಾಸಕರ ವ್ಯಾಪಾರ ಯಾಕೆ ಬೇಕು? ದೇಶದ ಸುರಕ್ಷತೆ ಹಿನ್ನೆಲೆಯಲ್ಲಿ ದಯವಿಟ್ಟು ಈ ರೀತಿ ಅವಕಾಶ ಬೇಡ. ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ. ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮ ಸರಿಯಾಗಿದೆ. ಈಗೀಗ ಮಳಿಗೆಗಳಿಗೆ ಹಿಂದೂ ಹೆಸರು ಇಟ್ಟುಕೊಂಡು ಮುಸ್ಲೀಮರು ವ್ಯಾಪಾರ ಮಾಡ್ತಾರೆ. ಹಿಂದೂಗಳು ಹಣೆ ಮೇಲೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದು ಮುತಾಲಿಕ್ ಸಲಹೆ ನೀಡಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]