ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಆರಂಭಗೊಂಡಿದ್ದು, ಹಲಾಲ್ (Halal) ಮುಕ್ತ ದೀಪಾವಳಿ (Deepavali) ಎಂಬ ಅಭಿಯಾನಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕರೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ದೇಶದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಹಲಾಲ್ ಮುಕ್ತ ದೀಪಾವಳಿಯನ್ನು ಈ ಬಾರಿ ಹಿಂದೂ ಸಮಾಜ ಮಾಡಬೇಕು. ಕಬ್ಬು, ಹೂ, ಹಣ್ಣು, ಪೂಜೆ ಸಾಮಗ್ರಿಗಳನ್ನು ಎಲ್ಲಾ ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು. ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಿದರೆ ಅಶಾಸ್ತ್ರವಾಗುತ್ತದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ ಎಂದು ತಿಳಿಸಿದರು.
ದೇಶದ ವಿಧ್ವಂಸಕ ಕೃತ್ಯಗಳಿಗೆ ಈ ಹಲಾಲ್ ಹಣವನ್ನು ಬಳಸಲಾಗುತ್ತಿದೆ. ದೇಶದ್ರೋಹಿ ಪಿಎಫ್‍ಐಗೆ (PFI) ಮೂಲ ಆದಾಯ ಈ ಹಲಾಲ್ ಆಗಿದೆ. ಹಳೆ ಹುಬ್ಬಳ್ಳಿ ಗಲಭೆ, ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಾಟೆ, ಸಿಎಎ ಪ್ರತಿಭಟನೆಗೆ ಹಲಾಲ್‍ನಿಂದಲೇ ಹಣ ವರ್ಗಾವಣೆಯಾಗುತ್ತದೆ. ನಾವು ಖರೀದಿಸುವ ಹಲಾಲ್ ಸರ್ಟಿಫಿಕೇಟ್ ನೀಡುವ ಸಾಮಗ್ರಿಗಳನ್ನು ಖರೀದಿ ಮಾಡುವುದರಿಂದ ರಾಕ್ಷಸರು ಹುಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: RSS ಶಕ್ತಿ ಸಹಿಸದೆ ಹೊಟ್ಟೆಕಿಚ್ಚಿನಿಂದ ಮಾತನಾಡುವವರ ಸಮಸ್ಯೆಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್
ಸರ್ಕಾರದ್ದು ದಪ್ಪ ಚರ್ಮ. ಅದಕ್ಕೆ ಬರೀ ಬಡಿಗೆಯಿಂದ ಹೊಡೆದರೆ ಸಾಲದು ಎಂದ ಅವರು, ದೇಶದಲ್ಲಿ ಮುಸ್ಲಿಮರಿಗೆ ನೀಡುತ್ತಿರುವ ಸೌಲಭ್ಯ ಹಿಂದೂಗಳಿಗೂ ಸಿಗುತ್ತಿಲ್ಲ. ಕೇವಲ ಅಲ್ಪಸಂಖ್ಯಾತರ ಮೀಸಲಾತಿ ಮಾತ್ರವಲ್ಲ ಎಲ್ಲಾ ಸೌಲಭ್ಯಗಳನ್ನು ವಾಪಸ್ಸು ಪಡೆಯಬೇಕು. ನಾನು ಶಾಸಕ ಅರವಿಂದ ಬೆಲ್ಲದ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಮಾಣ ವಚನ ಸ್ವೀಕಾರ