ಬೆಂಗಳೂರು: ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸಿ ಅದರಿಂದ ರಾಜಕೀಯ ಲಾಭ ಪಡೆಯಲು ಪ್ರಮೋದ್ ಮುತಾಲಿಕ್ ಹೀಗೆ ಅಭಿಯಾನ ಮಾಡುತ್ತಿದ್ದಾರೆ. ಅವರಿಗೆ ಎಂಪಿ ಅಥವಾ ಎಂಎಲ್‍ಎ ಸೀಟ್ ಫಿಕ್ಸ್ ಆದರೆ ಸುಮ್ಮನಿರುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಖಾಲಿದ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಈ ಬಗ್ಗೆ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ಅಕ್ಷಯ ತೃತೀಯ ದಿನ ಚಿನ್ನವನ್ನು ಹಿಂದೂ ವ್ಯಾಪಾರಿಗಳ ಬಳಿಯೇ ಕೊಂಡುಕೊಳ್ಳಿ ಯಾವುದೇ ಕಾರಣಕ್ಕೂ ಮುಸ್ಲಿಂ ಸಮುದಾಯದ ಚಿನ್ನದ ಅಂಗಡಿಯಲ್ಲಿ ಖರೀದಿಸಬೇಡಿ ಎಂದು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಮೂಡಿದೆ. ಪ್ರಮೋದ್ ಮುತಾಲಿಕ್ ಹೋರಾಟದಲ್ಲಿ ಸತ್ವ ಇಲ್ಲ. ಅವರು ಚುನಾವಣೆಯ ಟಿಕೆಟ್ ಆಸೆಗಾಗಿ ಈ ಹೋರಾಟ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ – ಮೌಲ್ವಿ, ಪತಿಯ ಸಹೋದರರಿಂದಲೇ ರೇಪ್
Advertisement
Advertisement
ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಹೋರಾಟ, ಹೋರಾಟ ಎಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅವರ ವೈಯಕ್ತಿಕ ಲಾಭ ಬೇಕಾಗಿದೆ. ಸಮಾಜ ಶಾಂತಿ ಕೆಡಿಸಲು ಮುತಾಲಿಕ್ ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಅವರಿಗೆ ಟಿಕೆಟ್ ನೀಡಿ ಆಗ ಈ ಹೋರಾಟ ಅಂತ್ಯವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸಿದ್ದರಾಮಯ್ಯನನ್ನು ನಾವು ಗೆಲ್ಲಿಸ್ತೀವಿ: ಎಚ್.ವಿಶ್ವನಾಥ್
Advertisement
ಚಿನ್ನವನ್ನು ವಿದೇಶದಿಂದ ಭಾರತ ರಫ್ತು ಮಾಡುತ್ತಿದೆ. ಅದೂ ಕೂಡ ಮುಸ್ಲಿಂ ರಾಷ್ಟ್ರಗಳಿಂದ ಹಾಗಾಗಿ ಈ ಬಗ್ಗೆ ಗಮನಕೊಡಿ ಮುತಾಲಿಕ್ ಹೋರಾಟದ ಬಗ್ಗೆ ಗಮನಕೊಡಬೇಡಿ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹಿಜಬ್‍ನಿಂದ ಶುರುವಾದ ಹಿಂದೂ ಮುಸ್ಲಿಮರ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತ ಸಾಗುತ್ತಿದೆ. ಹಿಜಬ್ ಬಳಿಕ ಯುಗಾದಿಯ ಹೊಸತೊಡಗಿಗೆ ಮುಸ್ಲಿಮರು ಕಟ್ ಮಾಡುವ ಹಲಾಲ್ ಕಟ್ ಬ್ಯಾನ್ ಮಾಡಿ ಜಟ್ಕಾ ಕಟ್ ಅಭಿಯಾನ ಶುರು ಮಾಡಿದ್ದ ಹಿಂದೂ ಪರ ಸಂಘಟನೆಗಳು ಇದೀಗ ಮುಸ್ಲಿಂ ಸಮುದಾಯದ ಚಿನ್ನದ ಅಂಗಡಿ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.