ಉಡುಪಿ: ಆರ್‌ಎಸ್‌ಎಸ್‌ನ ಶಕ್ತಿಯನ್ನು ಸಹಿಸದೆ ಟೀಕೆ ಮಾಡುವವರಿದ್ದಾರೆ. ಆರ್‌ಎಸ್‌ಎಸ್ (RSS) ಬಗ್ಗೆ ಗೊತ್ತಿದ್ದು ಹೊಟ್ಟೆಕಿಚ್ಚಿನಿಂದ ಮಾತನಾಡುವ ಕೆಲವರ ಸಮಸ್ಯೆಗೆ ಮದ್ದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (Pramod Madhwaraj) ಹೇಳಿದರು.
ಉಡುಪಿಯ (Udupi) ಪರ್ಕಳದಲ್ಲಿ ನಡೆದ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಪ್ರಮೋದ್ ಮಧ್ವರಾಜ್ ಭಾಗಿಯಾಗಿ ಕಸರತ್ತುಗಳು, ಯೋಗ ಪಥಸಂಚಲನ ವೀಕ್ಷಿಸಿ ಮಾತನಾಡಿದರು. ಸಂಘದ ಬಗ್ಗೆ ಹೊಟ್ಟೆಕಿಚ್ಚಿನಿಂದ ಮಾತನಾಡುವವರಿಗೆ ಮದ್ದಿಲ್ಲ. ಅಜ್ಞಾನದಿಂದ ಮಾತನಾಡುವವರು RSSನ ಒಳಗೆ ಬಂದು ಜ್ಞಾನ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಸದಾ RSSನ್ನು ಟೀಕಿಸುವ ಸಿದ್ದರಾಮಯ್ಯ (Siddaramaiah), ಎಡಪಂಥೀಯ ಚಿಂತಕರಿಗೆ ಟಾಂಗ್ ಕೊಟ್ಟ ಅವರು, ಆರ್‌ಎಸ್‌ಎಸ್ ದೇಶಭಕ್ತಿ, ದೇಶಪ್ರೇಮ, ದೇಶ ನಿಷ್ಠೆಯ ಸಂಘಟನೆಯಾಗಿದೆ. ದೇಶದ ಕಟ್ಟಕಡೆಯ ಬಡವನ ಬಗ್ಗೆ ಸೇವಾ ರೂಪದಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಕಳೆದ ಐದು ತಿಂಗಳಲ್ಲಿ ನಾನು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭ ಎಂದು ಕಿಡಿಕಾರಿದರು.
ದೇಶ ಕಟ್ಟುವ ಕೆಲಸ ಸಂಸ್ಕಾರ ಉದ್ದೀಪಿಸುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಕಟ್ಟ ಕಡೆಯ ವ್ಯಕ್ತಿಯ ಶಿಕ್ಷಣ ಮತ್ತು ಆರೋಗ್ಯಕ್ಕೆ RSS ಸೇವೆ ಸಲ್ಲಿಸುತ್ತಿದೆ. ಸಂಘವನ್ನು ತಿಳಿದುಕೊಳ್ಳದೆ ವಿರೋಧ ಮಾತನಾಡಬಾರದು. ನಾನು ಕೂಡ ಹಿಂದೆ ಆರ್‌ಎಸ್‌ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆ. ಆರ್‌ಎಸ್‌ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ. ಅಜ್ಞಾನದಿಂದ ಸಂಘದ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ ಎಂದರು. ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ – ಪಾಕ್, ಬಾಂಗ್ಲಾ, ಶ್ರೀಲಂಕಾಗಿಂತಲೂ ಕೆಳಗಿನ ಸ್ಥಾನದಲ್ಲಿ ಭಾರತ
ಬಿಜೆಪಿ (BJP) ಸೇರಿದ ನಂತರ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಪ್ರಮೋದ್ ಮಧ್ವರಾಜ್ ಭಾಗಿಯಾಗುತ್ತಿದ್ದಾರೆ. ಆರ್‌ಎಸ್‌ಎಸ್ ಶಾಖೆಗಳು ಪಥಸಂಚಲನ ಸಂದರ್ಭ ಸಂಘದ ಕಚೇರಿಗೆ ಭೇಟಿಕೊಟ್ಟು ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಮಾಣ ವಚನ ಸ್ವೀಕಾರ