ಉಡುಪಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯಿಂದ ಬರುತ್ತಿದ್ದಾರೆ. ನೀವೂ ಉಡುಪಿಗೆ ಬಂದು ಕನಕನ ಗುಡಿಯನ್ನು ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ (Pramod Madhwaraj) ಆಹ್ವಾನ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಮಧ್ವರಾಜ್ ಅವರು, ಕನಕನ ಕಿಂಡಿಯ ಮೂಲಕವಾದರೂ ಶ್ರೀ ಕೃಷ್ಣನ ದರ್ಶನ ಮಾಡಿ ಎಂದು ಸಿಎಂಗೆ ತಿಳಿಸಿದ್ದಾರೆ. ಇದನ್ನೂ ಓದಿ: `ಪವರ್ ಫೈಟ್ʼ ನಡುವೆ ದೇವರ ಮೊರೆಹೋದ ಡಿಕೆಶಿ; ಮನೆಗೇ ʻಹಂದನ ಕೆರೆ ಅಜ್ಜಯ್ಯನ ಗದ್ದುಗೆʼ ಆಗಮನ!

ಕೃಷ್ಣ ಮಠವನ್ನು ಸರ್ಕಾರೀಕರಣ ಮಾಡಲು ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಹಾಗೆ ಮಾಡಿದ್ರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಅವರು ಕೃಷ್ಣಮಠಕ್ಕೆ ಯಾಕೆ ಬರುತ್ತಿಲ್ಲ ಗೊತ್ತಿಲ್ಲ. ಆದರೆ, ಈ ಸೇವೆಯಿಂದ ಹಾಲುಮತ ಸಮುದಾಯ, ಕುರುಬ ಸಮುದಾಯಕ್ಕೆ ಬಹಳ ಸಂತಸವಾಗಿದೆ ಎಂದು ಹೇಳಿದ್ದಾರೆ.
ಕನಕನ ಕಿಂಡಿ, ಕನಕನ ಗುಡಿಯನ್ನಾದರೂ ನೋಡಲು ಉಡುಪಿಗೆ ಬನ್ನಿ. ಕನಕನ ಕಿಂಡಿಯ ಮೂಲಕವಾದರೂ ಕೃಷ್ಣ ದರ್ಶನ ಮಾಡಿ ಎಂದು ಸಿಎಂಗೆ ಹೇಳಿದ್ದಾರಲ್ಲದೇ, ಕನಕದಾಸರ ಕಿಂಡಿಗೆ ಸುವರ್ಣ ಕವಚ ಮಾಡಿಸಿರುವುದು ನನ್ನ ಪಾಲಿನ ಪುಣ್ಯ. ಕನಕನ ಗುಡಿಯನ್ನು ಶಿಲಾಮಯ ಮಾಡುವ ಮನಸಂಕಲ್ಪ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂವಿಧಾನ ಪ್ರಜಾಪ್ರಭುತ್ವದ ಬಲವಾದ ಅಡಿಪಾಯ, ನಮ್ಮ ಕಾರ್ಯಗಳ ಮೂಲಕ ಮೌಲ್ಯಗಳನ್ನ ಬಲಪಡಿಸೋಣ: ಮೋದಿ ಕರೆ

