ಬೇಳೆ ಬೆಲೆ ಇಳಿಕೆಗೆ ಕ್ರಮ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Public TV
2 Min Read
Togari Sorghum

– ಕಡಲೆ, ತೊಗರಿ, ಉದ್ದಿನ ಬೇಳೆಕಾಳುಗಳ ಬೆಲೆ ಇಳಿಕೆಗೆ ಸೂಚನೆ

ನವದೆಹಲಿ: ಬೇಳೆ-ಕಾಳು (Togari Sorghum) ಬೆಲೆ ಇಳಿಸುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಸೂಚಿಸಿದ್ದಾರೆ.

ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯದ (Ministry of Consumer Affairs) ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಸಚಿವರು ಈ ಬಗ್ಗೆ ತ್ವರಿತ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಯೋಗಿ ಕ್ಯಾಬಿನೆಟ್‌ಗೆ ಸರ್ಜರಿ – ಉಪ ಚುನಾವಣೆ ಬೆನ್ನಲ್ಲೇ ಸಂಪುಟ ಪುನರ್‌ ರಚನೆ

Togari Sorghum 2

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ (Chana Dal), ಉದ್ದು (Urad Dal) ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ – ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಧಾನ್ಯಗಳು ಲಭಿಸುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಸಚಿವರು ಹೇಳಿದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

Pralhad Joshi

ಸಣ್ಣ-ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಕ್ಷದಲ್ಲಿರುವ ಅಲ್ಪಸಂಖ್ಯಾತ ವಿಭಾಗವನ್ನು ವಿಸರ್ಜಿಸಬೇಕು – ಬಿಜೆಪಿ ನಾಯಕ ಸುವೆಂದು ಅಧಿಕಾರಿ

2025ಕ್ಕೆ GDP ಶೇ.7 ಬೆಳವಣಿಗೆ:
ಐಎಂಎಫ್ ವರದಿ ಪರಿಷ್ಕರಿಸಿದ್ದು, 2025 ರಲ್ಲಿ ಭಾರತದ GDP ಬೆಳವಣಿಗೆ ಶೇ.7 ರಷ್ಟು ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಜಾಗತಿಕ ಆರ್ಥಿಕತೆಯ ಸಾಲಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಐಎಂಎಫ್‌ನ ವರದಿಯೇ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಭಾರತದ ಬೆಳವಣಿಗೆಯು ಆರ್ಥಿಕ ವರ್ಷ 2025 ರಲ್ಲಿ ಶೇ.7ರಷ್ಟು GDP ಬೆಳವಣಿಗೆಯ ಮುನ್ಸೂಚನೆ ನೀಡಿದ್ದು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ಜೋಶಿ ಬಣ್ಣಿಸಿದ್ದಾರೆ.

Share This Article