ಹುಬ್ಬಳ್ಳಿ: ಪ್ರಧಾನ ಮಂತ್ರಿ ಅಲ್ಲಾ, ಪ್ರಚಾರ ಮಂತ್ರಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ (Pralhad Joshi) ಗರಂ ಆಗಿದ್ದಾರೆ. ಪ್ರಿಯಾಂಕ್ ಖರ್ಗೆ (Priyank Kharge), ಮೋದಿ ವಿರುದ್ಧ ರಾಜಕೀಯ ತೆವಲಿಗೆ, ಚಟಕ್ಕೆ ಮಾತಾಡುತ್ತಿದ್ದಾರೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ತಂದೆಯವರ ಕಾಲದಲ್ಲಿ ಕಾಂಗ್ರೆಸ್ ಏನಾಗಿದೆ ನೋಡಿ. ಅವರ ಅಧ್ಯಕ್ಷರಾಗೋಕೆ ಏನೆಲ್ಲ ಮಾಡಿದ್ದಾರೆ. ನೀವು ಸ್ಪರ್ಧೆ ಮಾಡಿರುವುದು ಕೇವಲ 230 ಸೀಟ್‌ನಲ್ಲಿ ಇಷ್ಟೆಲ್ಲ ಇದ್ದರೂ ಮೋದಿ ಬಗ್ಗೆ ಮಾತಾಡುತ್ತಿದ್ದೀರಿ. ಯಾವಾಗ ನೀವು ರಾಹುಲ್ ಗಾಂಧಿ ಲಾಂಚ್ ಮಾಡ್ತಿರೋ, ನಾವು ಆವಾಗ ಜಾಸ್ತಿ ಸೀಟ್ ಬಂದಿದ್ದೀವಿ. ಕಳೆದ ಬಾರಿ 303 ಸೀಟ್ ಬಂದಿದೆ. ಈ ಬಾರಿ 375 ಸೀಟ್ ಬರುತ್ತೆ. ಪರೋಕ್ಷವಾಗಿ ರಾಹುಲ್ ಗಾಂಧಿ ಎನ್ನುವ ಪ್ರೋಡಕ್ಟ್ ಸರಿ ಇಲ್ಲ ಎಂದರು. ಇದನ್ನೂ ಓದಿ: 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ
Advertisement
Advertisement
ದಿಂಗಾಲೇಶ್ವರ ಸ್ವಾಮೀಜಿ ಪ್ರಶ್ನೆಗೆ ಸಿಡಿಮಿಡಿಗೊಂಡ ಜೋಶಿ, ನಾನು ದಿಂಗಾಲೇಶ್ವರ ಸ್ವಾಮೀಜಿ ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನೀವು ದಿಂಗಾಲೇಶ್ವರ ಸ್ವಾಮೀಜಿ ಕುರಿತು ಪ್ರಶ್ನೆ ಕೇಳಬೇಡಿ. ನೀವು ಏನೇ ಕೇಳಿದರೂ ನಾನ ಮಾತಾಡಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
Advertisement
ಬಿ.ಕೆ.ಹರಿಪ್ರಸಾದ್ ಪೆನ್‌ಡ್ರೈವ್ ಬಾಂಬ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಸಿಎಂ ಡಿಸಿಎಂ ನಡುವೆ ತೀವ್ರ ಕಚ್ಚಾಟವಿದೆ. ಹೀಗಾಗಿ ಆಗಾಗ ಕೆಲವರು ಅಸಮಾಧಾನ ಹೊರ ಹಾಕ್ತಾರೆ. ಕಾಂಗ್ರೆಸ್‌ನಲ್ಲಿ ಯಾವಾಗ ಏನು ಆಗುತ್ತೆ ಗೊತ್ತಿಲ್ಲ. ಇದೇ 15 ರಂದು ನಾಮಪತ್ರ ಸಲ್ಲಿಕೆ ಮಾಡ್ತೀನಿ. ಮಾಜಿ ಸಿಎಂ ಯಡಿಯೂರಪ್ಪ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ