ಹುಬ್ಬಳ್ಳಿ: ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ ಊದುಬತ್ತಿ ಹಚ್ಚಿ, ಆರತಿ ಬೆಳಗುತ್ತಾರಾ ನೋಡೋಣ. ಅವರು ಟಿಪ್ಪು (Tippu Sultan) ಪ್ರತಿಮೆ ಮಾಡಲಿ, ಅವರನ್ನ ಜನ ಮನೆಗೆ ಕಳಸ್ತಾರೆ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಟಿಪ್ಪು ಪ್ರತಿಮೆಗೆ ಬೆಂಬಲ ಕೊಟ್ಟವರನ್ನು ಜನರು ಮನೆಗೆ ಕಳಿಸುತ್ತಾರೆ. ಈಗಲೂ ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ವಿರೋಧಿ. ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲವು. ಯಾವುದೇ ಮೂರ್ತಿ ನಿಲ್ಲಿಸಲು ಸರ್ಕಾರದ ಅನುಮತಿ ಬೇಕು. ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ. ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕು ಕೊಡ್ತೀವಿ. ನಾವು ಬೇಜವಬ್ದಾರಿಯಿಂದ ಮಾತಾಡೋಕೆ ಆಗಲ್ಲ ಎಂದು ತನ್ವೀರ್‌ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್
Advertisement
Advertisement
ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೆ ದೇವೇಗೌಡರಿಗೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳು, ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದ ಕರ್ನಾಟಕದ ಏಕೈಕ ನಾಯಕ. ಅವರನ್ನು ಕರೆದಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿಗಳು ನನಗೆ ಹೇಳಿದ್ದಾರೆ. ನಾನು ಕರೆದಿದ್ದೇನೆ ಎಂದು ಹೇಳಿದ್ದಾರೆ. ಆದರೆ ದೇವೇಗೌಡರು ಯಾಕೆ ಬಂದಿಲ್ಲ ಅನ್ನೋದನ್ನು ವಿಚಾರಿಸ್ತೀನಿ ಎಂದಿದ್ದಾರೆ.
Advertisement
Advertisement
ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ಆದರೆ ಅವರ ಅವಧಿಯಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲಿಲ್ಲ. ಹೆಸರು ಕೂಡ ಇಡಲಿಲ್ಲ. ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪು ಆಗಲಿಲ್ಲ. ನಾನು ದೇವೇಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆಕಿಚ್ಚಿನಿಂದ ಮಾತಾಡ್ತೀದಾರೆ. ನಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದೆ ಎಂಬ ಹೊಟ್ಟೆಕಿಚ್ಚು ಅವರದು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!