– ಚರ್ಚ್, ಮಸೀದಿಗಳಿಂದ ಒಂದು ನಯಾ ಪೈಸೆ ತೆಗೆದು ನೋಡಲಿ
ಹುಬ್ಬಳ್ಳಿ: ಅಯೋಧ್ಯೆ ಯಾತ್ರಿಕರ ರೈಲಿನಲ್ಲಿ ನಡೆದ ಗಲಾಟೆ ಕಾಂಗ್ರೆಸ್ (Congress) ತುಷ್ಟೀಕರಣ ರಾಜಕಾರಣದ ಫಲ. ಕಾಂಗ್ರೆಸ್ ಮತ್ತು ತುಷ್ಟೀಕರಣದ ಕೆಲ ಪಕ್ಷಗಳು ಈ ರೀತಿ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್‍ಗಾಗಿ ಇಂತಹ ಘಟನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯಾರಿಗೂ ಈ ರೀತಿಯ ಉತ್ತೇಜನ ಕೊಡಬಾರದು ಅನ್ನೋದು ನಮ್ಮ ಉದ್ದೇಶ. ಅಯೋಧ್ಯೆಗೆ ಹೋಗಿ ಬಂದರೆ ತಪ್ಪೇನು? ಕೆಲವರು ಮೆಕ್ಕಾ – ಮದೀನಾಕ್ಕೂ ಹೋಗುತ್ತಾರೆ. ಈ ರೀತಿ ಧಮ್ಕಿ ಹಾಕಿದವರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ಸರ್ಕಾರ ಅಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ
Advertisement
ಕಾಂಗ್ರೆಸ್ ಸರ್ಕಾರ ಇರುವವರೆಗೂ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಅವರಿಗೆ. ಕೆಜಿ ಹಳ್ಳಿ, ಡಿಜೆ ಹಳ್ಳಿಯಂತಹ ಪ್ರಕರಣ ಮಾಡಬಹುದು ಎಂಬ ಧೈರ್ಯವಿದೆ. ಹುಬ್ಬಳ್ಳಿ ಗಲಭೆ ಪ್ರಕರಣದ ಅರೋಪಿಗಳಿಗೂ ಪತ್ರ ಬರೆದು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಏನು ಬೇಕಾದರೂ ಮಾಡಬಹುದು ಎನ್ನುವ ಮಾನಸಿಕತೆ ಬೆಳೆದಿದೆ ಎಂದಿದ್ದಾರೆ.
Advertisement
Advertisement
ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯಗಳ ಅಂಗೀಕಾರ ವಿಚಾರವಾಗಿ ಮಾತನಾಡಿ, ಇದು ಅತ್ಯಂತ ದುರ್ದೈವದ ಸಂಗತಿ. ಹೆಚ್.ಕೆ ಪಾಟೀಲ್‍ರಂತಹ ಹಿರಿಯ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದಿರುವುದು ಘೋರ ದುರಂತ. ಪ್ರತಿಯೊಂದು ಪ್ಲಾನಿಂಗ್ ಕಮಿಷನ್‍ನಲ್ಲಿ ನಿರ್ಧಾರವಾಗುತ್ತೆ. 15ನೇ ಹಣಕಾಸು ಆಯೋಗದ ಪ್ರಕ್ರಿಯೆ ನಡೆದಾಗ ಸಿದ್ದರಾಮಯ್ಯ ಅವರ ಸರ್ಕಾರವೇ ಅಧಿಕಾರದಲ್ಲಿತ್ತು. ಹಿಂದೆ ಎಷ್ಟು ಅನುದಾನ ಬರ್ತಿತ್ತು? ಈಗ ಎಷ್ಟು ಬರುತ್ತಿದೆ ಎಂದು ಪರಿಶೀಲಿಸಲಿ. ಹಿಂದಿಗಿಂತ ಹೆಚ್ಚು ಅನುದಾನ ಬರುತ್ತಿರುವುದನ್ನು ಯಾಕೆ ಪರಿಗಣಿಸುತ್ತಿಲ್ಲ? ತಮ್ಮ ಕೊರತೆ ಮುಚ್ಚಿಕೊಳ್ಳಲು ದಾರಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳುವ ಮೂಲಕ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸಿಎಂ ಮತ್ತು ಹೆಚ್.ಕೆ ಪಾಟೀಲ್ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರ ದಿವಾಳಿಯಾಗಿ ದೇವಾಲಯಕ್ಕೆ ಟ್ಯಾಕ್ಸ್: ದೇವಸ್ಥಾನದ ಆದಾಯದ ಮೇಲೆ ತೆರಿಗೆ ವಿಚಾರ ಚರ್ಚ್ ಮತ್ತು ಮಸೀದಿಯಲ್ಲಿ ಎಷ್ಟು ಹಣ ಸಂಗ್ರಹ ಆಗುತ್ತೆ ಲೆಕ್ಕ ಕೊಡಲಿ. ಆ ಹಣದಲ್ಲಿ 10% ತೆರಿಗೆ ರೂಪದಲ್ಲಿ ಪಡೆಯಲಿ ನೋಡೋಣ. ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದನ್ನು ಸರಿದೂಗಿಸಲು ಬೇರೆ ಬೇರೆ ರೂಪದಲ್ಲಿ ತೆರಿಗೆ ಹಾಕಿದ್ದಾರೆ. ಈ ಮೂಲಕ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತಿದ್ದಾರೆ. ಚರ್ಚ್ ಮತ್ತು ಮಸೀದಿಗಳಿಂದ ಒಂದು ನಯಾ ಪೈಸೆ ತೆಗೆದು ನೋಡಲಿ. ದೇವಸ್ಥಾನದ ದುಡ್ಡು ಹೊಡೆಯಲು ನೋಡ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅವರ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿದೆ: ಡಿಕೆಶಿ