ನವದೆಹಲಿ: ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಗೆ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಶಿ, ಸಂಸತ್‌ನಲ್ಲಿ ಚರ್ಚೆಗೆ ಯಾವುದೇ ನಿರ್ಬಂಧಗಳು ಇಲ್ಲ. 1975 ರಲ್ಲಿ ಮಾತ್ರ ಜನರ ವಿಷಯ ಪ್ರಸ್ತಾಪಿಸಲು ಸಂಸತ್‌ನಲ್ಲಿ ನಿರ್ಬಂಧ ಇತ್ತು. ರಚನಾತ್ಮಕ ವಿರೋಧ ಪಕ್ಷಗಳ ಉತ್ತಮ ಚರ್ಚೆಗೆ ಯಾವಾಗಲೂ ಸ್ವಾಗತವಿರುತ್ತದೆ ಎಂದು ಟ್ವಿಟ್ಟರ್ ಮೂಲಕ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
Advertisement
Advertisement
ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದು ಟೀಕಿಸಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದ ಹಿನ್ನಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಈ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ
Advertisement
ರೂಪಾಯಿ ಮೌಲ್ಯ ಡಾಲರ್ ಎದುರು 80 ರೂ. ದಾಟಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 1,000 ರೂ. ದಾಟಿದೆ. ಜೂನ್ ತಿಂಗಳಲ್ಲಿ 1.3 ಕೋಟಿ ನಿರುದ್ಯೋಗ ಇದೆ. ದವಸ ಧಾನ್ಯಗಳ ಮೇಲೂ ಜಿಎಸ್‌ಟಿ ಹಾಕಲಾಗಿದೆ. ಜನರ ವಿಷಯ ಪ್ರಸ್ತಾಪಿಸಲು ನಮ್ಮನ್ನು ಯಾರೂ ತಡೆಯಲಾಗಲ್ಲ. ಸರ್ಕಾರ ಉತ್ತರ ಕೊಡಲೇಬೇಕು. ಸಂಸತ್‌ನಲ್ಲಿ ಚರ್ಚೆ, ಪ್ರಶ್ನೆಗಳಿಂದ ಓಡಿ ಹೋಗುವುದು ಅಸಂಸದೀಯ ಪ್ರಧಾನ ಮಂತ್ರಿಗಳೇ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕಿಡಿಕಾರಿದ್ದರು.
Advertisement
ಇದಕ್ಕೆ ತುರ್ತು ಪರಿಸ್ಥಿತಿಯ ದಿನಗಳ ಉದಾಹರಣೆ ನೀಡಿ ಉತ್ತರಿಸಿರುವ ಪ್ರಹ್ಲಾದ್ ಜೋಶಿ, ಕೇವಲ 1975 ರಲ್ಲಿ ಮಾತ್ರ ಜನರ ವಿಷಯ ಪ್ರಸ್ತಾಪಿಸಲು ನಿರ್ಬಂಧ ಹೇರಲಾಗಿತ್ತು. ಅದನ್ನು ಹೊರತುಪಡಿಸಿ ರಚನಾತ್ಮಕವಾಗಿ ವಿಚಾರ ಪ್ರಸ್ತಾಪಿಸಲು ವಿರೋಧ ಪಕ್ಷಕ್ಕೆ ಮುಕ್ತ ಅವಕಾಶವಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರ: ಮುತಾಲಿಕ್