ದಾವಣಗೆರೆ: ಮದರಾಸ ಶಿಕ್ಷಣವನ್ನು ಬ್ಯಾನ್ ಮಾಡಬೇಕು. ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರವಾಗುತ್ತಿದೆ. ಆಗಸ್ಟ್ 15 ರಂದು ಮದರಾಸಗಳಲ್ಲಿ ಮಕ್ಕಳು ಭಾರತ್ ಮಾತಕೀ ಜೈ, ವಂದೇ ಮಾತರಂ ಎಂದು ಕೂಗುವ ವೀಡಿಯೋ ಸರ್ಕಾರಕ್ಕೆ ರವಾನಿಸಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
Advertisement
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುರಾನ್ ಬೇಕಾದ್ರೆ ಮನೆಯಲ್ಲಿ ಕಲಿಸಲಿ, ಶಿಕ್ಷಣವನ್ನು ಉರ್ದು ಶಾಲೆಯಲ್ಲಿ ಪಠ್ಯ ಪುಸ್ತಕ ಮೂಲಕ ಓದಲಿ, ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರವಾಗುತ್ತಿದೆ. ಪಾಕಿಸ್ತಾನದಲ್ಲಿ ಮದರಸಗಳನ್ನು ಬ್ಯಾನ್ ಮಾಡಿದ್ದಾರೆ. ಇಸ್ಲಾಂ ದೇಶದಲ್ಲೇ ಬ್ಯಾನ್ ಮಾಡಿದ್ದಾರೆ. ಇಲ್ಲಿ ನೂರಕ್ಕೆ ನೂರರಷ್ಟು ಬ್ಯಾನ್ ಮಾಡಬೇಕು. ಭಾರತದ ಪಠ್ಯ ಪುಸ್ತಕ ಓದಿ ಭಾರತೀಯ ನಾಗರೀಕರಾಗಿ ಅದನ್ನು ಬಿಟ್ಟು ಪಾಕಿಸ್ತಾನಿ, ತಾಲಿಬಾನ್‍ಗಳಾಗಬಾರದು. ರಿಜಿಸ್ಟರ್ ಆಗದೇ ಇರುವ ಮದರಸಗಳು ಇವೆ. ಇದನ್ನು ನಿಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರ ಚಿಂತನೆ ಮಾಡಬೇಕು. ನೋಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಬದಲು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಪಾಸ್‌ವರ್ಡ್ ಹಂಚಿಕೆಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಪರೀಕ್ಷಿಸುತ್ತಿದೆ ಹೊಸ ವಿಧಾನ
Advertisement
ಸ್ವಾತಂತ್ರ್ಯ ದಿನಾಚರಣೆ ದಿನ ಎಲ್ಲಾ ಶಾಲೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ವಿಚಾರವಾಗಿ ಮಾತನಾಡಿ, ಮದರಸಗಳಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎನ್ನುವುದು ಯೋಗ್ಯವಾಗಿದೆ. ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಅ ಮಕ್ಕಳ ಬಾಯಿಯಲ್ಲಿ ರಾಷ್ಟ್ರ ಗೀತೆ ಹಾಡಿಸಿ ಭಾರತ್ ಮಾತಾಕೀ ಜೈ ಎನ್ನಿಸಬೇಕು ಉತ್ತರ ಪ್ರದೇಶ ಮಾದರಿಯಲ್ಲಿ ವಂದೇ ಮಾತರಂ ಭಾರತ್ ಮಾತ ಕೀ ಜೈ ಎಂದು ಮದರಸಾದಲ್ಲಿ ಕೂಗುವ ವೀಡಿಯೋ ರಾಜ್ಯ ಸರ್ಕಾರಕ್ಕೆ ರವಾನಿಸಬೇಕೆಂದು ಮುತಾಲಿಕ್ ಒತ್ತಾಯಿಸಿದರು.
Advertisement
Advertisement
ಗೋಹತ್ಯ ನಿಷೇಧ ಕಾಯ್ದೆಯಾಗಿದೆ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಎಲ್ಲಿ ಕಸಾಯಿಖಾನೆಗಳು ಇವೆ, ಎಲ್ಲಿ ಮಾರಾಟ ಆಗುತ್ತೆ ಎಂದು ಇಂಚಿಂಚು ಮಾಹಿತಿ ಪೊಲೀಸ್ ಇಲಾಖೆಗೆ ಗೊತ್ತಿರುತ್ತದೆ. ಪೊಲೀಸರಿಗೆ ಪ್ರೀ ಹ್ಯಾಂಡ್ ನೀಡಿದರೆ ಸಂಪೂರ್ಣ ನಿಲ್ಲುತ್ತದೆ. ಇಲ್ಲವಾದ್ರೆ ಬೂಟಾಟಿಗೆಯಾಗುತ್ತದೆ. ದಾವಣಗೆರೆಯಲ್ಲಿ 300ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ. ತಾಖತ್ ಇದ್ದರೆ ತೆರವು ಮಾಡಿ. ಕರ್ನಾಟಕ ಸರ್ಕಾರಕ್ಕೆ ಗೋ ಮಾತೆಯ ಮೇಲೆ ಕಳಕಳಿ ಇದ್ದಲ್ಲಿ ಗೋಹತ್ಯೆ ಕಾಯ್ದೆ ಜಾರಿಗೆ ತನ್ನಿ. ಪ್ರತ್ಯೇಕ ಸ್ಕ್ವಾಡ್ ಮಾಡಿ ಆಗ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತೆ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಗುರುತು ಮುಚ್ಚಿಟ್ಟು ಹಿಂದೂ ಯುವತಿಯನ್ನು ದೇವಾಲಯದಲ್ಲೇ ಮದುವೆಯಾದ- ಕೊನೆಗೆ ತಿಳೀತು ಅಸಲಿ ಸತ್ಯ
ಚಾಮರಾಜಪೇಟೆ ಈದ್ಗಾ ಮೈದಾನ ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಬಿಬಿಎಂಪಿಗೆ ಸೇರಿದೆ ಎಂದು ಹೇಳಿದೆ, ಅದ್ರೇ ಶಾಸಕ ಜಮೀರ್ ಈ ಜಾಗ ನಮ್ಮದು ಎಂದು ವಕ್ಫ್ ಬೋರ್ಡ್‍ನ್ನು ಎತ್ತಿಕಟ್ಟಿದ್ದಾರೆ. ಈ ಜಾಗ ನಮ್ಮದು ಎಂದು ಹೇಳಲು ವಕ್ಫ್ ಬೋರ್ಡ್ ಬಳಿ ಒಂದು ದಾಖಲೆ ಇಲ್ಲ. ಈ ಜಾಗ ನಮ್ಮದು ಎಂದು ಸರ್ಕಾರ ಡಿಕ್ಲೇರ್ ಮಾಡಲಿ. ಅಲ್ಲಿ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡ್ತಾರೆ ಹಾಗೇ ಗಣಪತಿ ಹಬ್ಬಕ್ಕೆ ಅವಕಾಶ ನೀಡಲಿ. ಅಲ್ಲಿ ರಾಷ್ಟ್ರ ಧ್ವಜ ಹಾರಿಸಲು ವಿರೋಧ ಮಾಡ್ತಾರೆ. ಹೀಗೆ ಮಾಡಿದರೆ ರಾಷ್ಟ್ರದ್ರೋಹಿಗಳಾಗ್ತಿರಿ. ಈದ್ಗಾ ಮೈದಾನ ಮಾಡಲು ಐದು ಎಕರೆಯನ್ನು ನೀಡಿದ್ದಾರೆ. ಕೂಡಲೇ ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ. ಅಲ್ಲಿರುವ ಗೋಡೆಯನ್ನು ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ ಎಂದರು.