ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಪ್ರಕಾಶ್ ರಾಜ್ ‘ಪಠಾಣ್’ ಸಿನಿಮಾದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಣ್ಣದ ಕುರುಡುತನವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಅವರು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ. ಕೇಸರಿ ಬಣ್ಣ ಎನ್ನುವ ಕಾರಣಕ್ಕಾಗಿ ಪಠಾಣ್ ಚಿತ್ರತಂಡಕ್ಕೆ ಕೊಡುತ್ತಿರುವ ತೊಂದರೆಯು ಅಸಹ್ಯಕರವಾದದ್ದು ಎನ್ನುವ ರೀತಿಯಲ್ಲಿ ಅವರು ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ. ಶಾರುಖ್ ಖಾನ್ ಹಸಿರು ಬಣ್ಣದ ಕಾಸ್ಟ್ಯೂಮ್ ತೊಟ್ಟಿದ್ದಾರೆ. ಬೇಷರಂ ರಂಗ್ ಅಂದರೆ, ನಾಚಿಕೆ ಇಲ್ಲದ ಬಣ್ಣ ಎಂದರ್ಥ. ಕೇಸರಿಯನ್ನು ನಾಚಿಕೆ ಇಲ್ಲದ ಬಣ್ಣಕ್ಕೆ ಹೋಲಿಸಲಾಗಿದೆ ಎನ್ನುವುದು ಹಲವರ ಆರೋಪ. ಇದನ್ನೇ ಇಟ್ಟುಕೊಂಡು ಪಠಾಣ್ ಸಿನಿಮಾ ಬೈಕಾಟ್ ಮಾಡಿ ಎಂಬ ಅಭಿಯಾನ ಕೂಡ ಶುರುವಾಗಿದೆ. ಈ ಎಲ್ಲರಿಗೂ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ. ಬಣ್ಣದ ಗಲಾಟೆ ಬಿಡುವುದು ಯಾವಾಗ? ಎಂದು ಕೇಳಿದ್ದಾರೆ.
Advertisement
Advertisement
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ಮೂರು ದಿನದಿಂದ ವಿವಾದ ಭುಗಿಲೆದ್ದಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಶಾರುಖ್ ಖಾನ್ ಬೇರೆ ಧರ್ಮದವರು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಕೆಲವರು ಶಾರುಖ್ ಪರವಾಗಿ ನಿಂತಿದ್ದು, ಅಕ್ಷಯ್ ಕುಮಾರ್ ನಟನೆಯ ಸಿನಿಮಾವೊಂದನ್ನು ಈ ಪ್ರಕರಣದಲ್ಲಿ ಎಳೆತಂದಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ: ಪ್ರಶಾಂತ್ ಸಂಬರಗಿ ಎಂಟ್ರಿ
Advertisement
ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕಾಂಬಿನೇಷನ್ ನ ‘ದೆ ದನಾ ದನ್’ ಸಿನಿಮಾದಲ್ಲೂ ಕತ್ರೀನಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ಸೆಕ್ಸಿಯಾಗಿ ಡಾನ್ಸ್ ಮಾಡಿದ್ದಾರೆ. ಆಗ ಮೌನವಹಿಸಿದವರು ಈಗೇಕೆ ಕೂಗಾಡುತ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಏನೇ ಮಾಡಿದರೂ ಅದು ಸರೀನಾ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ದೇ ದನಾ ದನ್ ಸಿನಿಮಾದ ಫೋಟೋವನ್ನೂ ಸಾಕ್ಷಿಯಾಗಿ ನೀಡಿದ್ದಾರೆ. ಹಾಗಾಗಿ ಕೇಸರಿ ಬಿಕಿನಿಗೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ನನ್ನು ಎಳೆತರಲಾಗಿದೆ.
ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆಎನ್ಯು ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.