ಹೆಸರಾಂತ ನಟ ಕಿಚ್ಚ ಸುದೀಪ್ (Sudeep) ರಾಜಕೀಯ (Politics) ಅಂಗಳದಲ್ಲಿ ಕಾಲಿಡುತ್ತಿದ್ದಂತೆಯೇ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ ಬಹುಭಾಷಾ ನಟ ಪ್ರಕಾಶ್ ರೈ (Prakash Raj). ಪ್ರತಿಭಾವಂತ ನಟ ಸುದೀಪ್ ಬಿಜೆಪಿ ಬೆಂಬಲಿಸಲಾರರು ಎನ್ನುವುದರಿಂದ ಹಿಡಿದು ಈವರೆಗೂ ಹಲವಾರು ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ವಿಚಾರವಾಗಿ ಸುದೀಪ್ ಮೌನವಹಿಸಿದ್ದರೂ, ರೈ ಸುಮ್ಮನಾಗುತ್ತಿಲ್ಲ. ಹಲವಾರು ರೀತಿಯಲ್ಲಿ ಅವರನ್ನು ಕೆಣಕುತ್ತಿದ್ದಾರೆ.
Advertisement
ನಿನ್ನೆ ಮತ್ತೊಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನೋಡ್ರಪ್ಪ, ನಿಮ್ ಮಾಮನೋ.. ನಿಮ್ ಅತ್ತೇನೊ.. ನಿಮ್ ಕಷ್ಟ ಕಾದಲ್ಲಿ ಸಹಾಯ ಮಾಡಿದ್ದರೆ, ನೀವು ದುಡಿದಿದ್ರಲ್ಲಿ 10%.. 20%.. ಇಲ್ಲ 30% ಕೊಡಿ. ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಲ್ಲೆ ಹೊಡೆಯೋಕೆ ಬಿಡ್ಬೇಡಿ.. ಅಷ್ಟೇ.. ಅಷ್ಟೇ..’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ
Advertisement
Advertisement
ಅದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಳ್ಳ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಇನ್ನು ಮುಂದೆ ನಿಮ್ಮನ್ನೂ ನಿಮ್ಮ ಪಕ್ಷವನ್ನೂ ಪ್ರಶ್ನಿಸುವ ಜನ ದನಿಗೆ ತಯಾರಾಗಿ’ ಎಂದು ಬರೆದಿದ್ದರು.
Advertisement
ಪ್ರಕಾಶ್ ರೈ ವಿಚಾರವಾಗಿ ಸುದೀಪ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಪ್ರಕಾಶ್ ರೈ ಒಬ್ಬ ಮೇರು ನಟ. ಅವರೊಂದಿಗೆ ಒಂದು ಸಿನಿಮಾ ಮಾಡಿರುವೆ. ಮತ್ತಷ್ಟು ಸಿನಿಮಾಗಳನ್ನು ಮಾಡಲು ಕಾಯುತ್ತಿರುವೆ ಎಂದಷ್ಟೇ ಉತ್ತರಿಸಿ ಸುಮ್ಮನಾಗಿದ್ದರು. ಆದರೆ, ಪ್ರಕಾಶ್ ರೈ ಮಾತ್ರ ಸುಮ್ಮನಿರುವಂತೆ ಕಾಣುತ್ತಿಲ್ಲ.