ರಾಯಚೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ಪೆನ್‍ಡ್ರೈವ್ ಪ್ರಕರಣದಿಂದ ಇದೀಗ ಸೈಡ್ ಎಫೆಕ್ಟ್ ರಾಯಚೂರಿನಲ್ಲಿ ಕಾಣಿಸಿಕೊಂಡಿದೆ.
Advertisement
ಹೌದು. ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಿಂದ ಜಿಲ್ಲೆಯ ಫೋಟೋಗ್ರಾಫರ್ (Photographers) ಹಾಗೂ ವಿಡಿಯೋಗ್ರಾಫರ್ ಗಳಿಗೆ ಬಿಸಿ ತಟ್ಟಿದೆ. ಪಾರ್ಸಲ್‍ನಲ್ಲಿ ಪೆನ್‍ಡ್ರೈವ್ ಇದ್ದರೆ ಪಾರ್ಸಲ್ ಸೇವೆ ಕ್ಯಾನ್ಸಲ್ ಮಾಡಲಾಗುತ್ತದೆ. ಕೆಲ ಏಜೆನ್ಸಿಗಳು ಮತ್ತು ಖಾಸಗಿ ಬಸ್‍ಗಳು ಪಾರ್ಸಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ.
Advertisement
Advertisement
ಟ್ರಾವೆಲ್ ಏಜೆನ್ಸಿಗಳ ನಡೆಯಿಂದ ಫೋಟೋಗ್ರಾಫರ್ ಗಳಿಗೆ ಸಂಕಷ್ಟ ಎದುರಾಗಿದೆ. ಬಸ್‍ಗಳಲ್ಲಿ ಪೆನ್‍ಡ್ರೈವ್ ಒಯ್ಯಲು ಡ್ರೈವರ್ ಗಳು ಸಹ ಹಿಂದೇಟು ಹಾಕುತ್ತಿದ್ದಾರೆ ಎಂದು ಫೋಟೋಗ್ರಾಫರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?
Advertisement
ಬೆಂಗಳೂರು, ಮಂಗಳೂರು, ಮೈಸೂರಿಗೆ ಮದುವೆಯ ಚಿತ್ರೀಕರಣದ ವಿಡಿಯೋ ಎಡಿಟಿಂಗ್ ಗಾಗಿ ಪೆನ್‍ಡ್ರೈವ್ ಪಾರ್ಸಲ್ ಮಾಡಲಾಗುತ್ತಿತ್ತು. ಬಾಕ್ಸ್‍ನಲ್ಲಿ ಪೆನ್‍ಡ್ರೈವ್ ಪ್ಯಾಕ್ ಮಾಡಿ ಫೋಟೋಗ್ರಾಫರ್ಸ್ ಕಳುಹಿಸುತ್ತಿದ್ದರು. ಆದರೆ ಇದೀಗ ಕ್ಯಾನ್ಸಲ್ ಮಾಡುತ್ತಿರುವುದರಿಂದ ಚಿತ್ರೀಕರಣದ ಎಡಿಟಿಂಗ್ ಮಾಡಿಸಲು ಫೋಟೋಗ್ರಾಫರ್‌ಗಳು ಹರಸಾಹಸ ಪಡುತ್ತಿದ್ದಾರೆ.