ಬೆಂಗಳೂರು: ಕಳೆದ 20 ದಿನದಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna) ತಮ್ಮ ಆಟವನ್ನು ಮುಂದುವರಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ (Bengaluru Airport) ವಿಶೇಷ ತನಿಖಾ ತಂಡದ ಪೊಲೀಸರು (SIT Police) ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಜರ್ಮನಿಯ ಮ್ಯೂನಿಕ್‌ನಿಂದ ರಿಟರ್ನ್ ಟಿಕೆಟ್ ಬುಕ್ಕಿಂಗ್ ಮಾಡಿದ್ದ ಪ್ರಜ್ವಲ್ ಮಧ್ಯರಾತ್ರಿ ಬರುವ ನಿರೀಕ್ಷೆಗಳು ಇತ್ತು. ಎಸ್‌ಐಟಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಡುಬಿಟ್ಟಿದ್ದರು. ಆದರೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಟ್ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್ ಲೋಗೋ
ಮಧ್ಯರಾತ್ರಿ 12:30ಕ್ಕೆ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಬರುವ ಸಾಧ್ಯತೆ ಇದ್ದ ಕಾರಣ ಪೊಲೀಸರು ಕಾದಿದ್ದರು. ನಂತರ ಬ್ರಿಟೀಷ್ ಏರ್‌ಲೈನ್ಸ್‌ನಲ್ಲಿ ಬರುವ ಮಾಹಿತಿ ತಿಳಿದು ಮಂಜಾನೆ 5 ಗಂಟೆಯ ವರೆಗೆ ಕಾದಿದ್ದರು. ಆದರೆ ಪ್ರಜ್ವಲ್ ರೇವಣ್ಣ ಈ ಎರಡೂ ವಿಮಾನದಲ್ಲಿ ಬಾರದ ಕಾರಣ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಯುವತಿಯ ಶೋಕಿ ಜೀವನ: ಚಿನ್ನದ ಸರಕ್ಕಾಗಿ ಮನೆ ಮಾಲೀಕರನ್ನೇ ಹತ್ಯೆಗೈದ ರೀಲ್ಸ್ ರಾಣಿ!
ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಲು ಟಿಕೆಟ್ ಬುಕ್ ಮಾಡಿದ್ದ ಖಚಿತ ಮಾಹಿತಿ ಸಿಕ್ಕಿದ ಕಾರಣ ಬುಧವಾರ ಬೆಳಗ್ಗೆಯಿಂದಲೇ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ವಿಮಾನದಿಂದ ಇಳಿದು ಹೊರಗೆ ಬರುತ್ತಿದ್ದಂತೆ ಎಕ್ಸಿಟ್ ಗೇಟ್‌ನಲ್ಲಿ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿತ್ತು.