ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾಗಳ ಮೂಲಕ ಉತ್ತಮ ಮನರಂಜನೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಪುರಾತನ ಫಿಲಂಸ್. ಈಗಾಗಲೇ ಸನ್ ಆಫ್ ಮುತ್ತಣ್ಣ (Son of Muthanna) ಎಂಬ ಭಾವನಾತ್ಮಕ ಕಥೆಯ ಚಿತ್ರ ನಿರ್ಮಿಸಿ ತೆರೆಗೆ ತರುತ್ತಿರುವ ಪುರಾತನ ಫಿಲಂಸ್ ಮುಂದಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devraj) ಅವರ ಜೊತೆಗೂಡಿ ಅತ್ಯುತ್ತಮ ತಾಂತ್ರಿಕತೆಯ ಹಾಗೂ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಪುರಾತನ ಫಿಲಂಸ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ “P2 ಪ್ರೊಡಕ್ಷನ್ಸ್” ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ ಮೂಲಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಒಳ್ಳೆಯ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದೆ. ಈಗಾಗಲೇ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕೆಲವು ಕೆಲಸಗಳನ್ನು ಮಾಡುತ್ತಿದೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ
ಇದುವರೆಗೆ ಲವರ್ ಬಾಯ್, ಆಕ್ಷನ್ ಹೀರೋ ಹೀಗೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸುವ ಮೂಲಕ ಗುರುತಿಸಿಕೊಂಡ ನಟ ಪ್ರಜ್ವಲ್ ದೇವರಾಜ್ ಇದೀಗ ಚಲನಚಿತ್ರ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದು, ದೊಡ್ಡ ಸಂಸ್ಥೆಯ ಜತೆ ಕೈಜೋಡಿಸಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಮಾಡುವ ಪ್ಲ್ಯಾನ್ ಮಾಡಿದ್ದಾರೆ.
 


 
		 
		 
		 
		 
		
 
		 
		 
		 
		