– ವಿಜಯೇಂದ್ರನಂತೆ ಸಿಎಂ ಅಕ್ರಮ ಹಣ ಮಾಡಿಲ್ಲ; ವಾಗ್ದಾಳಿ
ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಮಗು ಇದ್ದಂತೆ. ಯಾರು ಚಾಕ್ಲೇಟ್ ಕೊಡ್ತಾರೋ ಅವರ ಕಡೆ ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್(Pradeep Eshwar) ಲೇವಡಿ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಬಿಜೆಪಿಯ(BJP) ಧರಣಿಯಿಂದ ಜೆಡಿಎಸ್(JDS) ದೂರ ವಿಚಾರವಾಗಿ ಮಾತನಾಡಿದ ಅವರು, ಹೆಚ್‌ಡಿಕೆ ಅವರದ್ದು ಒಳ್ಳೆ ಮನಸ್ಸು. ಅವರಿಗೆ ಏನೂ ಗೊತ್ತಾಗಲ್ಲ ಎಂದರು. ಇದನ್ನೂ ಓದಿ: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಕೆಶಿ
ಕೇಂದ್ರದಲ್ಲಿ ಬೆಲೆ ಇಳಿಸಲು ಹೇಳಿ
ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಧರಣಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ತಾಕತ್ ಇದ್ರೆ ಕೇಂದ್ರದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಲು ಹೇಳಿ. ಹೊಗಲಿ ಬಿಜೆಪಿಯವರಿಗೆ ಏನಾದ್ರು ಇದ್ರೆ ನಮ್ಮ ಜಿಎಸ್‌ಟಿ(GST) ಹಣ ಕೊಡಿಸಲಿ. ಸದಾ ಸುದ್ದಿಯಲ್ಲಿರಲು ಬಿಜೆಪಿಯವರು ಧರಣಿ ಹಮ್ಮಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ
ಸಿಎಂ ಅಕ್ರಮ ಹಣ ಮಾಡಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(B Y Vijayendra) ಮಾಡಿರುವಂತೆ ಸಿಎಂ ಸಿದ್ದರಾಮಯ್ಯನವರು(Siddaramaiah) ಯಾವುದೇ ಅಕ್ರಮ ಹಣ ಮಾಡಿಲ್ಲ. ವಿನಾಕಾರಣ ಸಿದ್ದರಾಮಯ್ಯ ಕುಟುಂಬದ ಮೇಲೆ ಇಡಿ ಬಿಟ್ಟು ತೊಂದರೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ʻವಕ್ಫ್ ವಾರ್ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು
ವಿಜಯೇಂದ್ರ ಮೇಲೆ ಆರೋಪಗಳು ಇವೆ. ಅದನ್ನು ಬಿಟ್ಟು ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ. ಮೊದಲು ವಿಜಯೇಂದ್ರ ಇ.ಡಿ, ಐಟಿ, ಸಿಬಿಐನಿಂದ ಕ್ಲೀನ್ ಚಿಟ್ ಪಡೆಯಲಿ. ತಾವೇ ತನಿಖೆಗೊಳಪಟ್ಟು ಕ್ಲೀನ್ ಚಿಟ್ ಪಡೆಯಲಿ ನೋಡೋಣ ಎಂದು ಸವಾಲು ಹಾಕಿದರು.