– SSLC ಫಲಿತಾಂಶ ಹೆಚ್ಚಿಸಲು ಟೆಸ್ಟ್ ಸಿರೀಸ್ ಸ್ಕೀಂ ಚಾಲನೆಗೆ ಮುಂದಾದ ಶಾಸಕ
ಚಿಕ್ಕಬಳ್ಳಾಪುರ: ಜಾತಿ ಜನಗಣತಿ ವರದಿ (Caste Census Report) ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಲಿಜ ಸಮುದಾಯದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವನು. ಜಾತಿ ಜನಗಣತಿ ವರದಿಯಿಂದ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ
ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯನವರ ಬಳಿ ನನ್ನ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಒಳಿತಾಗಲಿದೆ. ನನ್ನ ಸಮುದಾಯದ ಪರವಾಗಿ ಕೇಳೋದು ನನ್ನ ಧರ್ಮ ಕರ್ತವ್ಯ. ಹಾಗಂತ ವರದಿ ಜಾರಿ ಮಾಡಲೇಬೇಕು ಅಂತ ನಾನು ಆದೇಶ ಮಾಡೋಕಾಗುತ್ತಾ? ಮುಂದಿನ ಬಾರಿ ಎಂಎಲ್‍ಎ ಆಗೋವಷ್ಟರಲ್ಲಿ 2ಎ ಮೀಸಲಾತಿ ಜಾರಿ ಆಗುವಂತೆ ಮಾಡ್ತೀನಿ. ಇದು ನನ್ನ ಸಮುದಾಯಕ್ಕೆ ಇದು ನಾನು ಕೊಡುವ ಭರವಸೆ ಎಂದು ಹೇಳಿದ್ದಾರೆ.
ಟೆಸ್ಟ್ ಸಿರೀಸ್ ಸ್ಕೀಂ ಚಾಲನೆಗೆ ಮುಂದಾದ ಶಾಸಕ:
ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ ಶಿಫ್ ಸ್ಕೀಂ ಘೋಷಣೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC ಫಲಿತಾಂಶ ಹೆಚ್ಚಳ ಮಾಡಲು ಎಂಎಲ್‍ಎ ಪ್ರದೀಪ್ ಈಶ್ವರ್ ಟೆಸ್ಟ್ ಸೀರೀಸ್ ಎಂಬ ಮತ್ತೊಂದು ಹೊಸ ಕಾರ್ಯಕ್ರಮ ಚಾಲನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ
ಕ್ಷೇತ್ರದ 24 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಎಲ್ಲಾ ಪ್ರೌಢಶಾಲೆಗಳ 3,000ಕ್ಕೂ ಹೆಚ್ಚು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 48 ದಿನವೂ ನಿತ್ಯ ಘಟಕ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ತಿಂಗಳ ನವೆಂಬರ್ 04 ರಿಂದ ಡಿಸೆಂಬರ್ 31ರ ವರೆಗೆ ಈ ಘಟಕ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನವೂ ಆಯಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಆದ್ರೆ ಈ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಪ್ರಶ್ನೆ ಪತ್ರಿಕೆಯ ಜೊತೆಗೆ ಅದರ ಕೆಳಗಡೆಯೇ ಉತ್ತರ ಬರೆಯಲು ಬೇಕಾಗುವಷ್ಟು ಖಾಲಿ ಜಾಗ ಇರುವಂತಹ ಪತ್ರಿಕೆಯನ್ನ ಶಾಸಕ ಪ್ರದೀಪ್ ಈಶ್ವರ್ ತಮ್ಮ ವೈಯುಕ್ತಿಕ ಹಣದಲ್ಲಿ ತಯಾರಿಸಲಿದ್ದಾರೆ.
ಪ್ರತಿದಿನವೂ ಶಾಲೆಗೆ ಪ್ರಶ್ನೆಪತ್ರಿಕೆಗಳನ್ನ ತಲುಪಸಿ ಪರೀಕ್ಷೆ ನಡೆಸಲಾಗುವುದು, ಆಯಾ ದಿನವೇ ಉತ್ತರ ಪತ್ರಿಕೆಗಳನ್ನ ಡಿಡಿಪಿಐ ಕಚೇರಿಗೆ ತಲುಪಿಸಿ ಬೇರೊಂದು ಶಾಲೆಯ ಶಿಕ್ಷಕರು ಅದರ ಮೌಲ್ಯಮಾಪನ ಮಾಡಲಿದ್ದು ವಾರದ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ರೀತಿ 48 ದಿನ ಇದುವರೆಗೂ ನಡೆದಿರುವ ಪಠ್ಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಈ ಹೊಸ ಕಾರ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ತಯಾರಿಕೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು ನನ್ನ ಸ್ವಂತ ಹಣ ಭರಿಸಲಾಗುತ್ತಿದೆ ಅಂತ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಹೀಗಾಗಿ ಈ ಕಾರ್ಯಕ್ರಮ ಚಾಲನೆ ಮಾಡುವ ಸಲುವಾಗಿ ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಿಕ್ಷಕರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.