ಚಿಕ್ಕಬಳ್ಳಾಪುರ: ದೆಹಲಿಯಿಂದ ಕಾಂಗ್ರೆಸ್ (Congress) ನಾಯಕರು ಬೈದಿರೋದ್ರಿಂದಲೇ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂದು ಚಿಕ್ಕಬಳ್ಳಾಪುರ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ಕೆ ಸುಧಾಕರ್ (K Sudhakar) ಟಾಂಗ್ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ ಸುಧಾಕರ್, ದೆಹಲಿ ಕಾಂಗ್ರೆಸ್‌ನವರು ಬೈದಿರೋದಕ್ಕಾದರೂ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದು ಒಳ್ಳೆಯ ಕೆಲಸ ಎಂದು ಕಾಲೆಳೆದಿದ್ದಾರೆ.
ನಿನ್ನೆ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿರೋದು ನಗೆಪಾಟಲು ಎಂದು ಸುಧಾಕರ್ ಟೀಕಿಸಿದ್ದರು. ಇಂದು ಬಿಗ್ ಬಾಸ್‌ನಿಂದ ಹೊರಬಂದು ಶಾಸಕ ಪ್ರದೀಪ್ ಈಶ್ವರ್ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಇದ್ದದ್ದೇ ಎರಡ್ಮೂರು ಗಂಟೆ : ಪ್ರದೀಪ್ ಈಶ್ವರ್
ವಾಹಿನಿಗಳ ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದರಲ್ಲಿ ತಪ್ಪೇನಿಲ್ಲ. ನಾನು ಬಿಗ್ ಬಾಸ್ ಮನೆಯಲ್ಲಿ 2-3 ತಾಸು ಮಾತ್ರ ಇದ್ದೆ. ನೂರು ದಿನ ಹೋಗಿದ್ದರೆ ಮಾತನಾಡಬಹುದಾಗಿತ್ತು. ಇದನ್ನು ಏಕೆ ವಿವಾದ ಮಾಡಲಾಗುತ್ತಿದೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಹೋಗಿದ್ದರಲ್ಲಿ ತಪ್ಪೇನಿದೆ?: ಪ್ರದೀಪ್ ಈಶ್ವರ್ ಪ್ರಶ್ನೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]