ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಳಿಕ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದು ಕರೆಸಿಕೊಂಡಿರುವ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ತಮ್ಮ ಹುಟ್ಟು ಹಬ್ಬ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಾರೆ ಎಂಬ ಪ್ರಶ್ನೆಯೊಂದು ಕೇಳಿ ಬರುತ್ತಿದೆ.
ಟಾಲಿವುಡ್ ಸಿನಿ ರಂಗದಲ್ಲಿ ಸದ್ಯ ಪ್ರಭಾಸ್ ಮದುವೆ ಈ ಕುರಿತ ಸುದ್ದಿ ಕೇಳಿ ಬರುತ್ತಿದ್ದು, ಆಕ್ಟೋಬರ್ 23 ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವೇಳೆಯೇ ತಮ್ಮ ಮದುವೆಯ ಸಿಕ್ರೇಟ್ ಬಿಚ್ಚಿಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಬಾಹುಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಯ ಬಳಿಕ ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯ ಪ್ರಭಾಸ್ ಬಹು ನಿರೀಕ್ಷಿತ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರವೂ ನವೆಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ನಡುವೆ ಪ್ರಭಾಸ್ ಚಿಕ್ಕಪ್ಪ ಕೂಡ ಕೃಷ್ಣಂರಾಜು ಕೂಡ ಮದುವೆ ಬಗ್ಗೆ ಮಾತನಾಡಿ ಪ್ರಭಾಸ್ ಒಪ್ಪಿಗೆ ನೀಡಿದರೆ ಮುಂದುವರೆಯುವುದಾಗಿ ತಿಳಿಸಿದ್ದರು. ಇತ್ತ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ಹಸೆಮಣೆ ಏರಲಿ ಎಂದು ಈ ಹಿಂದೆಯೇ ಅಭಿಮಾನಿಗಳು ಇಷ್ಟಪಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿ. ಅನುಷ್ಕಾರ ಭಾಗಮತಿ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದ ಪ್ರಭಾಸ್ `ಸ್ವೀಟಿ’ ಎಂದು ಕರೆದಿದ್ದರು. ಈ ವೇಳೆಯೂ ಅಭಿಮಾನಿಗಳು ಖುಷಿ ಪಟ್ಟಿದ್ದರು.
Advertisement
ಪ್ರಭಾಸ್ ರ ಸಾಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಬಿಡುಗಡೆಯಾಗಲಿದ್ದು ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಬಾಲಿವುಡ್ ಆಶಿಕಿ ನಟಿ ಶ್ರದ್ಧಾ ಕಪೂರ್ ನಟಿಸಿದ್ದು, ಚಿತ್ರದಲ್ಲಿ ಭಾರೀ ಆ್ಯಕ್ಷನ್ ಸನ್ನಿವೇಶಗಳ್ನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಚಿತ್ರ ಒಟ್ಟಾರೆ 200 ಕೋಟಿ ರೂ. ಬಜೆಟ್‍ನಲ್ಲಿ ಸಾಹೋ ನಿರ್ಮಿಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv