`ಬಾಹುಬಲಿ’ (Bahubali) ಖ್ಯಾತಿಯ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಆದಿಪುರುಷ್'(Adipurush) ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್ಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್. ಆದಿಪುರುಷ್ ಚಿತ್ರತಂಡ ಎಡವಟ್ಟಿನಿಂದ ಸದ್ಯ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಮಾಯಣದ ಕಥೆಯನ್ನಿಟ್ಟುಕೊಂಡು `ಆದಿಪುರುಷ್’ ಸಿನಿಮಾ ಮಾಡಲಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ರೆ, ನಾಯಕಿಯಾಗಿ ಕೃತಿ ಸನೂನ್ ನಟಿಸಿದ್ದಾರೆ. ಇನ್ನೂ ಪ್ರಭಾಸ್ ಮುಂದೆ ರಾವಣನಾಗಿ ಸೈಫ್ ಆಲಿ ಖಾನ್ ಅಬ್ಬರಿಸಿದ್ದಾರೆ. ಸದ್ಯ ಈ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಈ ಚಿತ್ರದ ಟೀಸರ್ ನೋಡಿ ಕಳಪೆ ಗ್ರಾಫಿಕ್ಸ್ ಎಂದು ನೆಟ್ಟಿಗರು ಟೀಕೆ ಮಾಡಿದ್ದರು. ಹಾಗಾಗಿ ಚಿತ್ರತಂಡ ಮುಂಬರುವ ಜೂನ್ 16ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದೆ. ಪ್ರಭಾಸ್ ಮತ್ತು ಕೃತಿ ಸನೂನ್ ಸಿನಿಮಾ ಮುಂದಿನ ವರ್ಷ 2023ಕ್ಕೆ ತೆರೆಗೆ ಅಪ್ಪಳಿಸಲಿದೆ.
`ಆದಿಪುರುಷ್’ ಚಿತ್ರದ ಟೀಸರ್ ಅ. 2ರಂದು ಅಯೋಧ್ಯೆಯಲ್ಲಿ ರಿಲೀಸ್ ಆಗಿತ್ತು. ಟೀಸರ್ ನೋಡಿದ ಫ್ಯಾನ್ಸ್, ಕಳಪೆ ಗ್ರಾಫಿಕ್ಸ್ ಎಂದು ಟ್ರೋಲ್ ಮಾಡಿದ್ದರು. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್ಗೆ ಆದಿಪುರುಷ್ ಟೀಸರ್ ನೋಡಿ ನಿರಾಸೆ ಆಗಿತ್ತು. ಇದೀಗ ಈ ಎಲ್ಲಾ ವಿಚಾರಗಳನ್ನ ಯೋಚಿಸಿ, ಒಂದೊಳ್ಳೆ ಬದಲಾವಣೆಯ ಮೂಲಕ ಬರಲು ತಂಡ ನಿರ್ಧರಿಸಿದೆ. ಇದನ್ನೂ ಓದಿ:ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್
जय श्री राम…#Adipurush releases IN THEATRES on June 16, 2023.#Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 #ShivChanana @manojmuntashir @TSeries @RETROPHILES1 @UV_Creations @Offladipurush pic.twitter.com/kXNnjlEsib
— Om Raut (@omraut) November 7, 2022
ಇನ್ನೂ ಪ್ರಭಾಸ್ ನಟನೆ ಆದಿಪುರುಷ್ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಈ ಕುರಿತು ನಿರ್ದೇಶಕ ಓಂ ರಾವತ್ ಸೋಷಿಯಲ್ ಮೀಡಿಯಾ ಮೂಲಕ ಅಪ್ಡೇಟ್ ನೀಡಿದ್ದಾರೆ.