ಸ್ವಿಗ್ಗಿ ವಿರುದ್ಧ ಗರಂ ಆದ ಪ್ರಭಾಸ್ ಸಹೋದರಿ ಪ್ರಸೀದಾ

Public TV
1 Min Read
PRASIDDHA

ಭಾರತೀಯ ಚಿತ್ರರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಪ್ರಭಾಸ್ ತಂಗಿ ಪ್ರಸೀದಾ ಈಗ ಸುದ್ದಿಯಲ್ಲಿದ್ದಾರೆ. ಆದರೆ ಸಿನಿಮಾ ವಿಚಾರವಾಗಿ ಅಲ್ಲ, ಊಟದ ವಿಚಾರಕ್ಕೆ ಸ್ವಿಗ್ಗಿ ಅವರನ್ನು ಸಖತ್ ತರಾಟೆಗೆ ತೆಗೆದುಕೊಂಡಿದ್ದಾರೆ.

PRABHAS 1ಸಹೋದರ ಪ್ರಭಾಸ್ ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ರೆ, ತಂಗಿ ಪ್ರಸೀದಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಸ್ವಿಗ್ಗಿ ವಿರುದ್ಧ ಪ್ರಭಾಸ್ ಸಹೋದರಿ ಫುಲ್ ಗರಂ ಆಗಿ ತರಾಟೆ ತೆಗೆದುಕೊಂಡಿದ್ದಾರೆ.

PRASIDDHAಬ್ಯುಸಿ ಜೀವನ ಶೈಲಿಯ ನಡುವೆ ಅಡುಗೆ ತಯಾರಿಸಿಕೊಳ್ಳಲು ಸಮಯ ಇಲ್ಲದವರಿಗೆ ಸ್ವಿಗ್ಗಿ ನೆರವಾಗುತ್ತಿವೆ. ಅಂತೆಯೇ ಬ್ಯುಸಿ ನಿರ್ಮಾಪಕಿ ಪ್ರಸೀದಾ ಉಪ್ಪಲಪಲ್ಲಿ ಸಹ ಮೊನ್ನೆ ಹೀಗೆ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿ, ಕಾಯುತ್ತಾ ಕೂತಿದ್ದಾರೆ. ನೆಚ್ಚಿನ ಊಟ ಆರ್ಡರ್ ಮಾಡಿ ನಿರೀಕ್ಷಿಸುತ್ತಿದ್ದ ಪ್ರಸೀದಾಗೆ ನಿರಾಸೆಯಾಗಿದೆ. ತಾವು ಆರ್ಡರ್ ಮಾಡಿದ ಊಟದ ಬದಲು ಬೇರೆಯ ಊಟವನ್ನು ಸ್ವಿಗ್ಗಿ ಡೆಲಿವರಿ ಮಾಡಿದೆ. ಸ್ವಿಗ್ಗಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಆದರೆ ಸ್ವಿಗ್ಗಿಯಿಂದ ಸೂಕ್ತ ಉತ್ತರ ಬಂದಿಲ್ಲ. ಇದು ಪ್ರಸೀದಾಗೆ ಇನ್ನಷ್ಟು ಬೇಸರ ತರಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ.

PRABHAS 2ಸ್ವಿಗ್ಗಿಯಿಂದ ಬಹಳ ಕೆಟ್ಟ ಅನುಭವ ಆಗಿದೆ. ಆರ್ಡರ್ ಮಾಡಿದ ಆಹಾರ ಬಿಟ್ಟು ಬೇರೆ ಏನೋ ಡೆಲಿವರಿ ಮಾಡಿದ್ದಾರೆ. ದೂರು ನೀಡಿದರೆ, ನಾವೇಲೂ ಮಾಡಲಾಗಲ್ಲ ಎಂಬ ಬೇಜವಾಬ್ದಾರಿ ಉತ್ತರ ಕೊಡ್ತಾರೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿ, ಕ್ವಾಲಿಟಿ ಕಂಟ್ರೋಲ್ ವಿಭಾಗ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಗ್ರಾಹಕರು ಇಂತಹ ಸಮಸ್ಯೆ ಅನುಭವಿಸಬೇಕಾಗಿ ಬರುವುದಿಲ್ಲ ಎಂದು ಪ್ರಭಾಸ್ ಸಹೋದರಿ ಪ್ರಸೀದಾ ಫುಲ್ ಗರಂ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *