ಡಾರ್ಲಿಂಗ್ ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ‘ಸಲಾರ್’ ಚಿತ್ರದ ಎರಡನೇ ಟ್ರೈಲರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಸ್ನೇಹಿತನಿಗಾಗಿ ಕಾಳಗಕ್ಕೆ ಇಳಿಯೋ ಪ್ರಭಾಸ್ ಖಡಕ್ ಫೈಟ್‌ಗೆ ಮಾಸ್ ಡೈಲಾಗ್‌ಗೆ ಅಭಿಮಾನಿಗಳು ಶಿಳ್ಳೆ ಹೊಡೆಯುತ್ತಿದ್ದಾರೆ.
‘ಸಲಾರ್’ ಚಿತ್ರದ ಟ್ರೈಲರ್ ಹೇಳ್ತಿರೋ ಕಥೆಯಲ್ಲಿ ಸ್ನೇಹ, ಆ ಸ್ನೇಹಕ್ಕಾಗಿ ಹೊಡೆದಾಡುವ ಪ್ರಭಾಸ್ (Prabhas) ಭಿನ್ನ ಅವತಾರವನ್ನ ತೋರಿಸಿದ್ದಾರೆ ನಿರ್ದೇಶಕರು. ಚಿಕ್ಕ ವಯಸ್ಸಿನಲ್ಲಿ ನಿನಗೊಂದು ಕತೆ ಹೇಳ್ತಿದ್ದೆ. ಪರ್ಷಿಯನ್ ಸಾಮ್ರಾಜ್ಯದಲ್ಲಿ ಸುಲ್ತಾನ್, ಎಷ್ಟೇ ದೊಡ್ಡ ಸಮಸ್ಯೆ ಬಂದ್ರು ತನ್ನ ಬಲವಾದ ಸೈನ್ಯಕ್ಕೂ ಹೇಳದೇ ಒಬ್ಬನಿಗೆ ಹೇಳ್ತಿದ್ದ. ಸುಲ್ತಾನ್ ಬೇಕು ಅಂದಿದ್ದನ್ನ ಏನಾದ್ರು ತರುತ್ತಿದ್ದ, ಬೇಡ ಅಂದಿದ್ದನ್ನ ಏನಾದ್ರು ಅಂತ್ಯ ಮಾಡ್ತಿದ್ದ ಎಂದು ಪ್ರಭಾಸ್ ಪಾತ್ರಕ್ಕೆ ಬಿಲ್ಡಪ್ ಕೊಡುತ್ತ ಟ್ರೈಲರ್ ಶುರುವಾಗಿದೆ. ಆ್ಯಕ್ಷನ್ ಸನ್ನಿವೇಶಗಳು ಬಹಳ ರೋಚಕವಾಗಿದೆ. ಅಷ್ಟೇ ವೈಲೆನ್ಸ್ ಕೂಡ ಕಾಣಿಸುತ್ತದೆ.


ದೇವ ಖಾನ್ಸರ್‌ಗೆ ಕಾಲಿಟ್ಟಿದ್ದೇ ತಡ ಅಲ್ಲಿ ರಕ್ತಪಾತವೇ ನಡೆಯುತ್ತದೆ. ನಾನು ಕಂಡಿದ್ದೆಲ್ಲ ಬೇಕು ಎನ್ನುವ ದುರಾಸೆ ವರದರಾಜ್‌ದು, ನೀನು ಕೇಳಿದ್ದನ್ನೆಲ್ಲ ಕೊಡುವೆ ಎಂಬ ಪ್ರೇಮ ದೇವನದ್ದು. ಇವರಿಬ್ಬರೂ ಖಾನ್ಸರ್ ಅನ್ನು ಹೇಗೆ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ, ಹೇಗೆ ಇತರೆ ಗ್ಯಾಂಗ್‌ಗಳನ್ನು ನಾಶ ಮಾಡುತ್ತಾರೆ. ಕೊನೆಗೆ ಇಬ್ಬರ ಸ್ನೇಹ ಏನಾಗುತ್ತದೆ ಎಂಬುದು ಕತೆ.

ಪ್ರಶಾಂತ್ ನೀಲ್ (Prashanth Neel) ನಿರ್ದೇಶನದಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡಿರೋದು ವಿಶೇಷ. ‘ರತ್ನನ್ ಪ್ರಪಂಚ’ ಹೀರೋ ಪ್ರಮೋದ್, ‘ಗುಳ್ಟು’ ನಟ ನವೀನ್ ಶಂಕರ್, ಗರುಡ ಖ್ಯಾತಿಯ ರಾಮಚಂದ್ರ ನಟಿಸಿದ್ದಾರೆ. ಇನ್ನೂ ಪ್ರಭಾಸ್ ಪಾತ್ರಕ್ಕೆ ಕನ್ನಡದ ನಟ ವಸಿಷ್ಠ ಸಿಂಹ ಕಂಠದಾನ ಮಾಡಿದ್ದಾರೆ. ಉಳಿದಂತೆ ನಾಯಕಿ ಶ್ರುತಿ ಹಾಸನ್, ಜಗಪತಿ ಬಾಬು, ಹಲವರು ನಟಿಸಿದ್ದಾರೆ.


