ಪ್ರಭಾಸ್ (Prabhas) ಇನ್ನೇನು ಮೂವತ್ತು ದಿನಗಳಲ್ಲಿ ವಿಶ್ವದ ತುಂಬಾ ಕುದುರೆ ಏರಿ ಹೊರಡಲಿದ್ದಾರೆ. ಎರಡು ಬಾರಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದರೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಅದಕ್ಕೆ ಅದು ಬರಿ ಭಾರತದಲ್ಲಿ ಮಾತ್ರ ಅಲ್ಲ, ವಿದೇಶಗಳಲ್ಲಿ ಡಾರ್ಲಿಂಗ್ ಫ್ಯಾನ್ಸ್ ಬಾವುಟ ಹಾರಿಸುತ್ತಿದ್ಧಾರೆ. ಏನಿದು ಸಲಾರ್ ಸಂಭ್ರಮ?
ಡಿಸೆಂಬರ್ 22 ಸಲಾರ್ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಇದೊಂದು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಮೂರು ಸೋಲಿನ ನಂತರ ಬರುತ್ತಿರುವ ಪ್ರಭಾಸ್ ಸಿನಿಮಾ ಎನ್ನುವ ಕುತೂಹಲ. ಇನ್ನೊಂದು ಕಡೆ ಪ್ರಶಾಂತ್ ನೀಲ್ ಕೆಜಿಎಫ್ (KGF) ಕಮಾಲ್ ಇಲ್ಲೂ ಮಾಡುತ್ತಾರಾ ಎನ್ನುವ ಆತಂಕ. ಎರಡಕ್ಕೂ ಡಿ.22 ಉತ್ತರ ಕೊಡಲಿದೆ. ಅದಕ್ಕೂ ಮುನ್ನವೇ ಸಲಾರ್ (Salaar) ಸಡಗರಕ್ಕೆ ಹೆಜ್ಜೆ ಹಾಕಿದೆ. ವಿದೇಶದಲ್ಲಿ ಈಗಾಗಲೇ ಟಿಕೆಟ್‌ಗಳು ಬಿಕರಿಯಾಗುತ್ತಿವೆ. 5 ಸಾವಿರ ಥೀಯೇಟರ್ ಅಲ್ಲಿ ರಿಲೀಸ್ ಆಗಲಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಟ್ರೈಲರ್‌ಗೆ ಪ್ರಭಾಸ್ ರಿಯಾಕ್ಷನ್
ಸುಮಾರು 1900ಕ್ಕೂ ಹೆಚ್ಚು ಲೋಕೇಶನ್‌ಗಳಲ್ಲಿ ಸಲಾರ್ ವಿದೇಶಗಳಲ್ಲಿ ಕಾಣಿಸಲಿದೆ. ಹೀಗಾಗಿ ಟಿಕೆಟ್ ಸದ್ಯ ಸೋಲ್ಡ್ ಔಟ್ ಆಗ್ತಿದೆ. ಅದೇ ರೀತಿ ಬುಕ್ ಮೈ ಶೋನಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಸಿನಿಮಾ ನೋಡಲು ಆಸೆ ವ್ಯಕ್ತಪಡಿಸಿದ್ದಾರೆ. ಇದೂ ದಾಖಲೆಯೇ. ಎಲ್ಲವೂ ದಾಖಲೆಯಾಗಿ ಹೋಗುತ್ತಿವೆ. ಕೊನೆಗೆ ಜನರು ಏನು ಮಾಡಬೇಕೆಂದು ಡಿ.22ಕ್ಕೆ ತೀರ್ಮಾನಿಸುತ್ತಾರೆ. ಪ್ರಭಾಸ್ ಗೆಲ್ಲುತ್ತಾರಾ ಅಥವಾ ಪ್ರಶಾಂತ್ ಮಾತ್ರ ಬಾವುಟ ಹಾರಿಸುತ್ತಾರಾ? ಕಾಯಬೇಕಿದೆ.