ಸಲಾರ್ (Salaar) ಬಿಡುಗಡೆ ದಿನ ಮುಂದೆ ಹೋಗಿದ್ದಿನ್ನೂ ಖಚಿತವಾಗಿಲ್ಲ. ಅಷ್ಟರಲ್ಲಿ ಭಾರತೀಯ ಸಿನಿ ರಂಗದಲ್ಲಿ ಅಲ್ಲಕಲ್ಲೋಲ. ಕಾರಣ ಇದು ಬಿಡುಗಡೆಯಾಗುತ್ತದೆ ಎನ್ನುವ ಕಾರಣಕ್ಕೆ ಹಲವಾರು ಸಿನಿಮಾ ಆಚೀಚೆ ಹೋಗಿದ್ದವು. ಈಗ ಎಲ್ಲ ಉಲ್ಟಾ ಪಲ್ಟಾ. ಹೀಗಾಗಿಯೇ ಈಗ ‘ಸಲಾರ್’ ಹಾಗೂ ‘ಲಿಯೋ’ (Leo) ನಡುವೆ ಯುದ್ಧ ನಡೆಯಲಿದೆ ಎನ್ನುವ ಮಾತು ಕೇಳುತ್ತಿದೆ. ಪ್ರಭಾಸ್ (Prabhas) – ದಳಪತಿ ವಿಜಯ್ ಖಡ್ಗ ಹಿಡಿಯಲಿದ್ದಾರೆ ಎನ್ನುವುದು ಹೊಯ್ದಾಡುತ್ತಿದೆ. ಇಬ್ಬರೂ ಒಂದೇ ದಿನ ತೊಡೆ ತಟ್ಟುತ್ತಾರಾ? ಇಲ್ಲಿದೆ ಮಾಹಿತಿ.
ಸೆ.28 ಈ ದಿನಕ್ಕಾಗಿ ಸಕಲ ಸಿನಿ ಪ್ರೇಮಿಗಳು ಕಾಯುತ್ತಿದ್ದರು. ಪ್ರಭಾಸ್ ಫ್ಯಾನ್ಸ್ ಬಿಡಿ. ಅವರು ಮಹಾ ಹಬ್ಬ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಬಂದೇ ಬಿಟ್ಟಿತು ದಿನ ಹತ್ತಿರ.ಇದನ್ನೇ ಜಪ ಮಾಡುತ್ತಿದ್ದರು. ಆದರೆ ಸಲಾರ್ ಏಕಾಏಕಿ ಮುಂದೆ ಹೋಗಿದೆ. ಇನ್ಯಾವಾಗ ಬರಲಿದೆ? ಅದಕ್ಕೂ ನಿರ್ಮಾಣ ಸಂಸ್ಥೆಯಿಂದ ಉತ್ತರ ಇಲ್ಲ. ಇದನ್ನೂ ಓದಿ:ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್
ಎಲ್ಲ ಅಲ್ಲಲ್ಲೇ ನಿಂತು ಬಿಟ್ಟಿದೆ. ಹೊಸ ಡೇಟ್ ಅನೌನ್ಸ್ಮೆಂಟ್ ಸದ್ಯದಲ್ಲೇ ಆಗಲಿದೆ. ಅಲ್ಲಿವರೆಗೆ ಕಾಯಬೇಕು. ಈಗ ಎದ್ದಿದೆ ನೋಡಿ ಬಿರುಗಾಳಿ. ಗ್ರೇಟ್ ಡೈರೆಕ್ಟರ್ ಲೋಕೇಶ್ ಕನಕರಾಜ್ (Lokesh Kanagaraj) ಸಾರಥ್ಯದ ‘ಲಿಯೋ’ ಅಕ್ಟೋಬರ್ ಮೂರನೇ ವಾರ ಬರಲು ನಿಗದಿಯಾಗಿದೆ. ಈಗ ಸಲಾರ್ ಕೂಡ ಅದೇ ಸಮಯಕ್ಕೆ ಎಂಟ್ರಿ ಕೊಡಲಿದೆಯಾ? ಅನುಮಾನ ಎದ್ದಿದೆ.
ಸಲಾರ್ ಸಿನಿಮಾ 50%ರಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಅದು ಮುಗಿಯೋದು ಯಾವಾಗ? ಉತ್ತರ ಖಚಿತವಿಲ್ಲ. ಆದರೂ ಅಕ್ಟೋಬರ್‌ನಲ್ಲಿ ಸಲಾರ್ ಹಾಜರಾಗಲಿದೆ ಅನ್ನೋದು ಸದ್ಯದ ಸಮಾಚಾರ. ಆದರೆ ಮೊದಲೇ ದಳಪತಿ ವಿಜಯ್ (Vijay Thalapathy) ಲಿಯೋ ಆ ದಿನಕ್ಕೆ ಫಿಕ್ಸ್ ಆಗಿದೆ. ಅದರ ಆಸುಪಾಸಿನ ವಾರದಲ್ಲಿಯೇ ಸಲಾರ್ (Salaar) ಬರಲಿದೆಯಾ? ಅಥವಾ ಇನ್ನೊಂದು ದಿನ ನೋಡಿಕೊಳ್ಳಲಿದೆಯಾ? ಅಕಸ್ಮಾತ್ ಹಾಗೇನಾದರೂ ಆದರೆ ವಿಶ್ವವೇ ದಿಕ್ಕೆಟ್ಟು ಹೋಗಲಿದೆ. ಇಬ್ಬರು ಸ್ಟಾರ್ ನಟರ ಸಿನಿಮಾ ಜಟಾಪಟಿಯಲ್ಲಿ ಪ್ರೇಕ್ಷಕ ಪ್ರಭು ಯಾರ ಕೈಹಿಡಿಯಲಿದ್ದಾರೆ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]