ಹೈದರಾಬಾದ್: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಮುಂದಿನ ಚಿತ್ರವು ಜೋತಿಷ್ಯ ಶಾಸ್ತ್ರವನ್ನು ಅಧಾರಿಸಿದೆ ಎಂಬ ಸುದ್ದಿ ಈಗ ಎಲ್ಲಡೆ ಹಾರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕುತೂಹಲಗಳು ಹೆಚ್ಚಾಗಿದೆ.
Advertisement
ಪ್ರಸ್ತುತ ಪ್ರಭಾಸ್ ಅವರು ತಮ್ಮ ಸಾಹೋ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಸಾಹೋ ಚಿತ್ರವು ಮುಂದಿನ ವರ್ಷದಲ್ಲಿ ತೆರೆಕಾಣುವ ಸಾಧ್ಯತೆಗಳಿವೆ. ಈ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದು, ಪ್ರಭಾಸ್‍ಗೆ ಹಿರೋಯಿನ್ ಆಗಿ ಬಾಲಿವುಡ್ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.
Advertisement
Advertisement
ಸಾಹೋ ಚಿತ್ರದ ನಂತರ ನಟ ಪ್ರಭಾಸ್ ಮತ್ತೊಂದು ಚಿತ್ರಕ್ಕೆ ಸೈನ್ ಮಾಡಿದ್ದು, ರಾಧಕೃಷ್ಣ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ ಮುಂದಿನ ವರ್ಷದಲ್ಲಿ ಆರಂಭಗೊಳ್ಳಲಿದೆ. ಈ ಹಿಂದೆ ರಾಧಕೃಷ್ಣ ಅವರ ನಿರ್ದೇಶನದಲ್ಲಿ ಬಂದ `ಜಿಲ್’ ಚಿತ್ರವು ನಟ ಗೋಪಿಚಂದ್‍ಗೆ ಉತ್ತಮ ಗೆಲುವನ್ನು ನೀಡಿತ್ತು.
Advertisement
ರಾಧಕೃಷ್ಣ ಅವರ ಚಿತ್ರದ ಕಥೆಯು ಜೋತಿಷ್ಯ ಶಾಸ್ತ್ರದ ಅಧಾರವಾಗಿ ಸಿದ್ಧಗೊಂಡಿದೆ ಎಂಬ ಸುದ್ದಿಯನ್ನು ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರ 1980ರ ದಶಕದ ಕಥೆಯನ್ನು ಹೊಂದಿದೆ. ಚಿತ್ರದ ಬಹುತೇಕ ಶೂಟಿಂಕ್ ಯುರೋಪ್‍ನಲ್ಲಿ ನಡೆಯಲಿದ್ದು, ರೊಮ್ಯಾಂಟಿಕ್ ಹಾಗೂ ಆ್ಯಕ್ಷನ್ ಎಲಿಮೆಂಟ್‍ಗಳನ್ನು ಹೊಂದಿದೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಪ್ರಭಾಸ್ ತಮ್ಮ ಸ್ವಂತ ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣಡುತ್ತಿದ್ದಾರೆ. ಸಾಹೋ ಚಿತ್ರವು ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಪ್ರಭಾಸ್‍ರ 3 ಚಿತ್ರಗಳು ಯುವಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಂತಾಗುತ್ತದೆ.