Cinema

ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?

Published

on

Share this

ಚೆನ್ನೈ: ಬಾಹುಬಲಿ ಪ್ರಭಾಸ್ ಬಹುಭಾಷೆ ನಟಿ ಪೂಜಾ ಹೆಗ್ಡೆ ಮೇಲೆ ಮುನಿಸಿಕೊಂಡಿದ್ದರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಪ್ರಭಾಸ್ ಮತ್ತು ಪೂಜಾ ಮೊದಲಬಾರಿಗೆ ‘ರಾಧೆಶ್ಯಾಮ’ ಚಿತ್ರದ ಮೂಲಕ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈ ಹಿನ್ನೆಲೆ ಇವರು ಶೂಟಿಂಗ್ ನಲ್ಲಿ ಪಾಲ್ಗುಳುತ್ತಿದ್ದು, ಪೂಜಾ ಮಾತ್ರ ಯಾವಾಗಲೂ ಶೂಟಿಂಗ್ ಗೆ ತಡವಾಗಿ ಬರುತ್ತಾರೆ ಎಂದು ಪ್ರಭಾಸ್ ಅವರ ಮೇಲೆ ಕೋಪಗೊಂಡಿದ್ದಾರೆ. ಅದು ಅಲ್ಲದೇ ನಿರ್ದೇಶಕರ ಮುಂದೆ ಪೂಜಾ ದೊಡ್ಡ ನಟಿ ಎಂದು ತೋರಿಸುವುದು ಪ್ರಭಾಸ್‍ಗೆ ಸರಿ ಎನಿಸುತ್ತಿಲ್ಲ. ಈ ಹಿನ್ನೆಲೆ ಅವರು ಪೂಜಾ ಅವರ ಜೊತೆ ಮಾತನಾಡುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡ BB ಸ್ಪರ್ಧಿ

ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜನವರಿಯಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ರಾಧಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, 70ರ ದಶಕದ ಪ್ರೇಮ ಕಥೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ರಚಿಸಲಾಗಿದೆ. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

ಪ್ರಭಾಸ್ ಆದಿಪುರುಷ ಮತ್ತು ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‘ಸಲಾರ್’ ಸಿನಿಮಾವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮಾಡುತ್ತಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications